ಗಂಗಾವತಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಮಹಾಸಭಾ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರು ಮಾತನಾಡಿದರು. ತಾಲೂಕು ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಹಿರೇಮಠ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ವಿವಿಧ ಘಟಕದ ಪದಾಧಿಕಾರಿಗಳಾದ ಶಿಲ್ಪಾ ಶ್ರೀನಿವಾಸ, ನಂದಿನಿ ಮುದ್ಗಲ್ ಇತರರಿದ್ದರು. 
ಜಿಲ್ಲೆ

ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯರಾಗಿ

Kopala - Desk - Eraveni

ಗಂಗಾವತಿ: ವಾರ್ಡ್ ಮತ್ತು ಗ್ರಾಮಗಳಲ್ಲಿ ಸಂಚಾಲಕರ ನೇಮಕ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಒತ್ತು ನೀಡಬೇಕಿದ್ದು, ಸಂಘಟನಾತ್ಮಕವಾಗಿ ಬಲಪಡಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ನಿಕಟಪೂರ್ವ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರು ಹೇಳಿದರು.

ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು.

ಅಭಿಯಾನದಲ್ಲಿ ಮುಖ್ಯ ಘಟಕ, ಮಹಿಳಾ ಮತ್ತು ಯುವ ಘಟಕ ಸಕ್ರಿಯರಾಗಬೇಕಿದ್ದು, ಸದಸ್ಯತ್ವಕ್ಕಾಗಿ ವಾರ್ಡ್ ಮತ್ತು ಗ್ರಾಮಗಳಲ್ಲಿ ಸಂಚಾಲಕರನ್ನು ನೇಮಿಸಿ.

ಮಹಾಸಭಾ ಪದಾಧಿಕಾರಿಗಳು ಮತ್ತು ಸದಸ್ಯರು, ವೀರಶೈವ ಸಮಾಜದ ಒಳಪಂಗಡದಲ್ಲಿ ಪದಾಧಿಕಾರಿಗಳಾಗಿ ಗುರುತಿಸಿಕೊಳ್ಳದೇ ವೀರಶೈವ-ಲಿಂಗಾಯತ ಮಹಾಸಭಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಮಹಾಸಭಾ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ಮನೋಹರ ಸ್ವಾಮಿ ಹಿರೇಮಠ, ಪ್ರಮುಖರಾದ ಮನೋಹರಗೌಡ ಹೇರೂರು, ಅನಿತಾ ರಾಜೇಂದ್ರಪ್ರಸಾದ, ಡಾ.ಮಂಜುನಾಥ ಪಾಟೀಲ್, ವಿವಿಧ ಘಟಕದ ಪದಾಧಿಕಾರಿಗಳಾದ ಕರಿಬಸಪ್ಪ ಬೂದಗುಂಪಾ, ಶರಣಬಸವ ಹುಲಿಹೈದರ್, ಬಸವರಾಜ ಹಿರೇಮಠ ಮುದೇನೂರ, ನಂದಿನಿ ಮುದ್ಗಲ್, ಶಿಲ್ಪಾ ಶ್ರೀನಿವಾಸ ಇತರರಿದ್ದರು.