ಬೆಂಗಳೂರು: ಕೋವಿಡ್ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಮೇಕೆದಾಟು ಪಾದಯಾತ್ರೆಗೆ ಭಾನುವಾರ ಮರು ಚಾಲನೆ ದೊರೆಯುತ್ತಿದ್ದು, ರಾಮನಗರದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕೋವಿಡ್ನಿಂದಾಗಿ ಜ.13ಕ್ಕೆ ಅಂತ್ಯ ಕಂಡಿದ್ದ ಪಾದಯಾತ್ರೆ ಎರಡನೇ ಹಂತದಲ್ಲಿ ಮುಂದುವರಿಯುತ್ತಿದ್ದು, ಒಟ್ಟಾರೆ 140 ಕಿ.ಮೀ. ಸಾಗುವ ಪಾದಯಾತ್ರೆಯ ಮೊದಲ ಹಂತದಲ್ಲಿ ಕಾಂಗ್ರೆಸ್ ನಾಯಕರು 65 ಕಿಮೀ ನಡಿಗೆಯನ್ನು ಜ.12ರ ಸಂಜೆಗೆ ಪೂರ್ಣಗೊಳಿಸಿದ್ದರು. ಸರ್ಕಾರ ಪಾದಯಾತ್ರೆಗೆ ಅವಕಾಶ ನೀಡದ ಕಾರಣ ಜ.13ರಂದು ಅಂತ್ಯ ಕಂಡಿತ್ತು. ಪಾದಯಾತ್ರೆಯಲ್ಲಿ ಕಾಂಗ್ರೆಸ್ನ ಕೇಂದ್ರ ಮತ್ತು ರಾಜ್ಯದ ನಾಯಕರು ಪಾಲ್ಗೊಳ್ಳಲಿದ್ದಾರೆ.
ಮಾ.4ರಂದು ಬಜೆಟ್ ಅಧಿವೇಶನ ನಡೆಯುವ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಿದ್ದ 4 ದಿನಗಳ ಪಾದಯಾತ್ರೆಯನ್ನು 3 ದಿನಗಳಿಗೆ ಸೀಮಿತಗೊಳಿಸಿದ್ದು, ರಾಮನಗರದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನಕ್ಕೆ ಒಟ್ಟಾರೆ 80 ಕಿ.ಮೀ. ದೂರವನ್ನು 5 ದಿನಗಳಲ್ಲಿ ಕ್ರಮಿಸಲಿದೆ.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ರ್ಖಗೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ರಾಮನಗರ ನಗರದ ಅಧಿದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ನಾಯಕರು ವಿಶೇಷ ಪೂಜೆ ಸಲ್ಲಿಸಲಿದ್ದು, ನಂತರ ಪೀರನ್ ಷಾವಲಿ ಷಾ ದರ್ಗಾಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಲಿದ್ದಾರೆ. ಎಲ್ಲ ಮುಖಂಡರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲು ಸ್ಥಳಿಯ ಮುಖಂಡರು ಸಿದ್ಧತೆ ನಡೆಸಿದ್ದಾರೆ.
ಬೆಂಬಲ ನೀಡಲು ಡಿಕೆಶಿ ಮನವಿ
ಬೆಂಗಳೂರು ನಾಗರಿಕರಿಗೆ ಕುಡಿಯುವ ನೀರು ಪೂರೈಸಲು, ಕಾವೇರಿ ಪ್ರದೇಶದ ರೈತರನ್ನು ಬದುಕಿಸಲು ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಇದು ಪಾತೀತ ಹೋರಾಟ. ಎಲ್ಲ ಅಪಾರ್ಟ್ಮೆಂಟ್ ಸಂಗಳು, ಕಾಮಿರ್ಕ, ಕೈಗಾರಿಕಾ ಸಂಟನೆ, ಎನ್ಜಿಒ, ಚಿತ್ರರಂಗದವರು, ಧರ್ಮಗುರುಗಳು, ಜನಸಾಮಾನ್ಯರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಪಾದಯಾತ್ರೆಗಿಲ್ಲ ಅನುಮತಿ
ಸಂಗಮದಿಂದ-ಬೆಂಗಳೂರುವರೆಗೆ ಹಮ್ಮಿಕೊಂಡಿದ್ದ ಮೊದಲ ಹಂತದ ಪಾದಯಾತ್ರೆಗೆ ಕಾಂಗ್ರೆಸ್, ಜಿಲ್ಲಾಡಳಿತದಿಂದ ಅನುಮತಿ ಪಡೆದಿರಲಿಲ್ಲ. ಇದೀಗ ಎರಡನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ್ದರೂ ಕೋವಿಡ್ ನಿಯಮಗಳು ಇನ್ನು ರಾಜ್ಯದಲ್ಲಿ ಜಾರಿಯಲ್ಲಿರುವ ಕಾರಣ ಜಿಲ್ಲಾಡಳಿತ ಪಾದಯಾತ್ರೆಗೆ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಒಂದು ವೇಳೆ ನಿಯಮ ಮೀರಿ ಪಾದಯಾತ್ರೆ ಕೈಗೊಂಡರೆ ಪ್ರಕರಣ ದಾಖಲು ಮಾಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಸಹ ಮತ್ತೊಂದು ಪ್ರಕರಣ ದಾಖಲು ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಅಂಜಿಕೆ ವ್ಯಕ್ತಪಡಿಸದೆ ಪಾದಯಾತ್ರೆ ಮುಂದುವರಿಸಲು ಅಡಿಯಿಟ್ಟಿದೆ.
ಕಾಂಗ್ರೆಸ್ನವರು ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆಂದು ಜಗತ್ತಿಗೆ ಗೊತ್ತಾಗಿದೆ. ಪಾದಯಾತ್ರೆ-1 ಮತ್ತು 2 ಎಂದು ಮಾಡುತ್ತಿದ್ದಾರೆ. ರಾಜಕಾರಣವೇ ಅವರಿಗೆ ಮುಖ್ಯ. ಅಧಿವೇಶವನ್ನೂ ರಾಜಕಾರಣಕ್ಕಾಗಿಯೇ ಹಾಳು ಮಾಡಿದರು. ಮುಂದಿನ ದಿನಗಳಲ್ಲಿ ಹೊರಗೆ ಸಹ ಅದನ್ನೇ ಮುಂದುವರಿಸುತ್ತಿದ್ದಾರೆ. ಕನಿಷ್ಠ ಕೋವಿಡ್ ನಿಯಮಗಳಿದ್ದು ಎಲ್ಲರೂ ಅದನ್ನು ಪಾಲಿಸಬೇಕು.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ