ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಮೇಘಾಲಯ ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಭೇಟಿ ನೀಡಿದರು. ಪ್ರಮುಖರಾದ ಆನಂದ್ ಸಿ ಕುಂದರ್, ಪ್ರಶಾಂತ್ ಶೆಟ್ಟಿ, ಸುಧಾ ಎ ಪೂಜಾರಿ ಮೊದಲಾದವರಿದ್ದರು.  
ಜಿಲ್ಲೆ

ಅಮೃತೇಶ್ವರಿ ದೇವಳಕ್ಕೆ ಮೇಘಾಲಯ ರಾಜ್ಯಪಾಲ ಭೇಟಿ

ಇಂದಿರಾ ಎನ್ ಕೆ

ಕೋಟ: ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಮೆಘಾಲಯ ರಾಜ್ಯಪಾಲ ಸಿ.ಎಚ್ ವಿಜಯಶಂಕರ್ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇಗುಲ ಅಧ್ಯಕ್ಷ ಆನಂದ್ ಸಿ. ಕುಂದರ್ ಪ್ರಸಾದ ನೀಡಿ ಗೌರವಿಸಿದರು. ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಸುಧಾ ಎ. ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್, ಎಂ.ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ, ಚಂದ್ರ ಆಚಾರ್, ರತನ್ ಐತಾಳ್, ಅರ್ಚಕ ಪ್ರತಿನಿಧಿ ಸುಬ್ರಾಯ ಜೋಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಮಹಿಳಾ ಮೋರ್ಚಾದ ರೋಹಿಣಿ ಪೈ, ಕೋಟ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಭುಜಂಗ ಗುರಿಕಾರ ಮತ್ತಿತರರು ಇದ್ದರು.