ಜಿಲ್ಲೆ

ಧಮ್ಮಚಕ್ರ ದಿನ ನಾಳೆ ಪೂರ್ವಭಾವಿ ಸಭೆ

ಬಾಬುರಾವ ಯಡ್ರಾಮಿ


ಕಲಬುರಗಿ :ಇಲ್ಲಿನ ಸೇಡಂ ರಸ್ತೆಯಲ್ಲಿರುವ ಬುದ್ಧ ವಿಹಾರದಲ್ಲಿ ೬೭ನೇ ಧಮ್ಮಚಕ್ರ ಪ್ರವರ್ತನ ದಿನ ಆಚರಣೆ ಕಾರ್ಯಕ್ರಮ ಕುರಿತು ಚರ್ಚೆ ನಡೆಸಲು ಪೂರ್ವ ಸಿದ್ಧತಾ ಸಭೆಯನ್ನು ಅ.೧೫ ರಂದು ಸಂಜೆ ೫ ಗಂಟೆಗೆ ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರೆಯಲಾಗಿದೆ. ರಾಧಾಕೃಷ್ಣ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ. ಉಪಾಸಕರು ಪ್ರಮುಖರು ಪಾಲ್ಗೊಳ್ಳುವಂತೆ ಸಿದ್ದಾರ್ಥ ವಿಹಾರ ಟ್ರಸ್ಟ್  ವಿಶ್ವಸ್ಥ ಮಂಡಳಿಯ ಆಡಳಿತಾಧಿಕಾರಿ ತಿಳಿಸಿದ್ದಾರೆ.