ಜಿಲ್ಲೆ

ಜಮ್ಮಾಬಾಣೆ ಜಮೀನಿನ ವಿಚಾರದಲ್ಲಿ ಸಭೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲೆಯ ಜಮ್ಮಾಬಾಣೆ ಜಮೀನಿನ ವಿಚಾರವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಒಳಗೊಂಡ ಸಭೆ ಮಂಗಳವಾರ ಬೆಳಗಳೂರಿನಲ್ಲಿ ನಡೆಯಿತು. ಜಮ್ಮ ಬಾಣೆ ಜಮೀನಿನ ಸಂಬAಧ ಭೂ ಕಂದಾಯ ಕಾಯ್ದೆ 1964 ಸೆಕ್ಷನ್ 84ರಂತೆ ಕಂದಾಯವನ್ನು ನಿಗದಿಪಡಿಸಿಕೊಂಡು ಭೂ ಕಂದಾಯ ಕಾಯ್ದೆ ಸೆಕ್ಷನ್ 127 ರಿಂದ 136 ರವರೆಗೆ ಇರುವ ಸೆಕ್ಷನ್ ಅಡಿಯಲ್ಲಿ ಕ್ರಮ ವಹಿಸಲು ಮತ್ತು ನಂತರ ಚಾಲ್ತಿಯಲ್ಲಿರುವ ಪೋಡಿ ಮುಕ್ತ ಅಭಿಯಾನದ ರೀತಿಯಲ್ಲಿ ಸರ್ವೇ ಮಾಡಿಸಿ ಪ್ರತ್ಯೇಕವಾಗಿ ಆರ್ ಟಿ ಸಿ ಮತ್ತು ಆಕಾರ್ ಬಂದ್‌ನೊAದಿಗೆ ದುರಸ್ತಿ ಕಾರ್ಯ ಕೈಗೊಳ್ಳಬೇಕು.

ಈ ಎಲ್ಲಾ ಪ್ರಕ್ರಿಯೆಗಳನ್ನು ನಿರ್ವಹಿಸಲು ಬೇಕಾಗುವ ಕಾಲಾವಕಾಶ ಮತ್ತು ಮಾನವ ಸಂಪನ್ಮೂಲದ ಲಭ್ಯತೆ ಹಾಗೂ ಹೆಚ್ಚುವರಿಯಾಗಿ ಬೇಕಾಗುವ ಸರ್ವೆ ಉಪಕರಣಗಳು ಮತ್ತು ಭೂಮಾಪಕರುಗಳನ್ನು ನಿಯೋಜಿಸಬೇಕು. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕ್ರಮವಹಿದಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಸರ್ಕಾರದ ಅಪರ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಕಂದಾಯ ಇಲಾಖೆಯ ಹಾಗೂ ಸರ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಅಧಿಕಾರಿಗಳು ಹಾಜರಿದ್ದರು.