ಮಂಡ್ಯ: ಮಹಿಳೆಯರಲ್ಲಿ ವಿಶೇಷ ಶಕ್ತಿ ಇದೆ. ಸ್ವಾಭಿಮಾನದಿಂದ ದುಡಿದು ಸ್ವಾವಲಂಬಿಗಳಾಗೋಣ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ ಹೇಳಿದರು.
ನಗರದ ಗಾಂಧಿನಗರದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳು ಆಯ್ಕೆ ಮತ್ತು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಕ್ಕಲಿಗ ಸಮುದಾಯದ ಮಹಿಳೆಯರು ಒಗ್ಗೂಡಬೇಕಿದೆ. ಸಮುದಾಯದ ಪ್ರಗತಿ ಮತ್ತು ಮಹಿಳೋಧಯಾಭೀವೃದ್ದಿಗೆ ಹೋರಾಟಕ್ಕೂ ಸಿದ್ಧರಿರಬೇಕಿದೆ ಎಂದು ನುಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಒಕ್ಕಲಿಗ ಮಹಿಳೆಯರನ್ನು ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಅನ್ಯಾಯಕ್ಕೊಳಗಾದರೆ ಸಿಡಿದು ನಿಲ್ಲುವ ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಿದೆ. ಸಂಘಟನೆಯನ್ನು ಬಲಪಡಿಸಲು ಶಕ್ತಿತುಂಬಿ ಸದಸ್ಯರನ್ನಾಗಿಸಲು ಜಾಗೃತಿ ಹೆಚ್ಚಿಸಬೇಕಿದೆ ಎಂದರು.
ಸಭೆಯನ್ನು ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಮಿತ್ರಾ ರಮೇಶ್ ಉದ್ಘಾಟಿಸಿದರು. ರಾಜ್ಯ ಗೌರವಾಧ್ಯಕ್ಷೆ ಜ್ಯೋತಿ ನಾಗಣ್ಣ, ಮೈಸೂರು ಜಿಲ್ಲಾಧ್ಯಕ್ಷೆ ಲತಾ, ಮಂಡ್ಯ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಕಲ್ಲಹಳ್ಳಿ, ಕಾರ್ಯದರ್ಶಿ ವೈ.ಎಚ್.ರತ್ನಮ್ಮ, ಖಜಾಂಚಿ ಪ್ರಭಾ, ಅಂಜನಾ ಶ್ರೀಕಾಂತ್ ಇತರರಿದ್ದರು.