ಸೋಮವಾರಪೇಟೆ: ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಪತ್ರಿಕಾಭವನದಲ್ಲಿ ನಡೆಯಿತು. ಮಾಜಿ ಸೈನಿಕರಾದ ಮೂವತ್ತೊಕ್ಲು ಗ್ರಾಮದ ಎನ್.ಟಿ. ಗಣಪತಿ, ಕಾಂಡನಕೊಲ್ಲಿ ಗ್ರಾಮದ ಎಂ.ಎಸ್. ನಾಣಯ್ಯ ಹಾಗೂ ಕಾನ್ವೆಂಟ್ ಬಾಣೆಯ ಕೆ.ಟಿ. ಚೋಂದಮ್ಮ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಎಸ್.ಎಂ. ಸುಬ್ರಹ್ಮಣ್ಯ, ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಎಂ.ಜಿ. ಕೆಂಪಯ್ಯ ಮತ್ತಿತರರು ಇದ್ದರು.