ಸುದ್ದಿಗೋಷ್ಠಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಆರ್​.ಸಿ. ಪಾಟೀಲ, ಗುಂಡು ಪಾಟೀಲ, ಬಸವರಾಜ ಇಟಗಿ ಇದ್ದರು. 
ಜಿಲ್ಲೆ

ನಾಳೆ 2ಎ ಮೀಸಲಾತಿಗಾಗಿ ಉಳವಿಯಲ್ಲಿ ಸಭೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ "2ಎ' ಮೀಸಲಾತಿ ಪಡೆಯುವ ಹೋರಾಟದ ಕುರಿತು ಚರ್ಚಿಸಲು ಜೂ.23ರಂದು ಮಧ್ಯಾಹ್ನ 1 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಉಳವಿಯಲ್ಲಿ ಸಂಕಲ್ಪ ಸಭೆ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ಮೀಸಲಾತಿ ಕೇಳುವುದಕ್ಕಿಂತ ಜನರ ಬಳಿಯೇ ಹೋಗಿ, ಸಂಟನೆ ಮಾಡುತ್ತೇವೆ. ಅವರು ನೀಡುವ ಸಲಹೆಗಳನ್ನು ಕ್ರೋಡಿಕರಿಸಿ ನಿರ್ಧಾರ ಪ್ರಕಟಿಸುತ್ತೇವೆ. ಮೀಸಲಾತಿ ಆದೇಶ ಪತ್ರ ಕೈಸೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಎಂಟನೇ ಹಂತದ ಪ್ರತಿಾ ಕ್ರಾಂತಿ ಅಭಿಯಾನ ಹೋರಾಟವನ್ನು ಯಾವ ವಿಧಾನಸಭಾ ೇತ್ರದಿಂದ ಆರಂಭಿಸಬೇಕು ಮತ್ತು ಯಾವ ಜನಪ್ರತಿನಿಧಿಗಳ ಜತೆ ಸಭೆ ನಡೆಸಬೇಕೆಂಬ ಕುರಿತೂ ಸಂಕಲ್ಪ ಸಭೆಯಲ್ಲೇ ತೀರ್ಮಾನಿಸುತ್ತೇವೆ ಎಂದರು.

ಈ ಹಿಂದೆ ಉಳವಿಯಲ್ಲಿ ಸಂಕಲ್ಪ ಸಭೆ ಮಾಡಿದ ನಂತರ ಹೋರಾಟಕ್ಕೆ ಬಲ ಬಂದಿತ್ತು. ಹಾಗಾಗಿ ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲಾ ಟಕಗಳ ಸಹಯೋಗದಲ್ಲಿ ಮತ್ತೆ ಅಲ್ಲಿಯೇ ಸಂಕಲ್ಪ ಸಭೆ ನಡೆಸುತ್ತಿದ್ದು, ರಾಜ್ಯ, ಜಿಲ್ಲೆ ಮತ್ತು ತಾಲೂಕು ಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು. ಜೂ.24ರಂದು ಬೆಳಗ್ಗೆ 8ಕ್ಕೆ ಉಳವಿಯಲ್ಲೆ ಇಷ್ಟಲಿಂಗ ಪೂಜೆ ನಡೆಸುತ್ತೇವೆ ಎಂದರು.

ಪಂಚಮಸಾಲಿ ಸಮುದಾಯದ ಜನಪ್ರತಿನಿಧಿಗಳನ್ನು ರಾಜ್ಯ ಸರ್ಕಾರ ನಿಯಂತ್ರಣದಲ್ಲಿಟ್ಟುಕೊಂಡಿದೆ ಎಂಬುವುದು ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲೇ ಜಗಜ್ಜಾಹಿರಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನಮ್ಮ ಸಮುದಾಯದ ಎಲ್ಲ ನಾಯಕರ ಮೇಲೆ ನಮಗೆ ವಿಶ್ವಾಸವಿಲ್ಲ. ಆದರೆ, ಕೆಲವು ಗಟ್ಟಿ ನಾಯಕರಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ. ಬದ್ಧತೆಯಿಂದ ನಮ್ಮೊಂದಿಗೆ ಹೋರಾಡುತ್ತಿದ್ದಾರೆ. ಅವರೊಂದಿಗೆ ಹೋರಾಡಿ ಗುರಿ ಮುಟ್ಟುತ್ತೇವೆ ಎಂಬ ಆಶಾಭಾವ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆರ್​.ಸಿ. ಪಾಟೀಲ, ಗುಂಡು ಪಾಟೀಲ, ಬಸವರಾಜ ಇಟಗಿ ಇದ್ದರು.