ರಾಯಚೂರು ಈ ಬೇಸಿಗೆಯಲ್ಲಿ ಯಾವುದೇ ಗ್ರಾಮಗಳಿಗೆ ಕುಡಿಯವ ನೀರಿನ ಸಮಸ್ಯೆಯಾಗದಂತೆ ಅಽಕಾರಿಗಳು ನೋಡಿಕೊಳ್ಳಬೇಕು. ಹಣದ ಕೊರತೆ ಇದ್ದರೆ ತಿಳಿಸಿ, ಅನುದಾನ ಕೊಡುತ್ತೇವೆ. ಆದರೆ, ನೀರಿಲ್ಲ ಅಂತ ಜನತೆ ಕೊಡ ಹಿಡಿದು ಅಡ್ಡಾಡುವಂತಾಗಬಾರದೆAದು ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶï ರುದ್ರಪ್ಪ ಪಾಟೀಲï ಸಂಬAಧಪಟ್ಟ ಅಽಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯವ ನೀರು ಸರಬರಾಜು ವಿಷಯಕ್ಕೆ ಸಂಬAಽಸಿದAತೆ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀರಿಲ್ಲ ಎಂದು ಜನರು ಪ್ರತಿಭಟನೆಗೆ ಇಳಿಯುವ ಹಂತಕ್ಕೆ ಬರಬಾರದು. ಎಲ್ಲ ತಾಲೂಕಗಳಲ್ಲಿ ಟಾಸ್ಕ್ ಪೋರ್ಸ ಸಭೆ ನಡೆಸಬೇಕು. ಈ ಸಂದರ್ಭದಲ್ಲಿ ಎಲ್ಲ ಗ್ರಾಮ ಪಂಚಾಯತಗಳ ಪಿಡಿಓಗಳು ಕರೆ ಸ್ವೀಕರಿಸಿ ಜನತೆಗೆ ಸ್ಪಂದನೆ ನೀಡಬೇಕು. ಜನರಿಗೆ ಅನುಕೂಲವಾಗುವ ಹಾಗೆ ಸಹಾಯವಾಣಿ ಆರಂಭಿಸಲು ಕ್ರಮ ವಹಿಸಬೇಕು ಎಂದು ಸಚಿವರು ಜಿ¯್ಲÁಽಕಾರಿಗಳಿಗೆ ಸೂಚನೆ ನೀಡಿದರು.
ಸಿಂಧನೂರ, ಮಸ್ಕಿ ಮತ್ತು ಮಾನ್ವಿ ತಾಲೂಕುಗಳ ವ್ಯಾಪ್ತಿಯಲ್ಲಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಬೆಳೆ ಹಾನಿಗೀಡಾದ ಬಗ್ಗೆ ಕೂಡಲೇ ಸರ್ವೆ ನಡೆಸಿ ವರದಿ ನೀಡಲು ಕ್ರಮವಹಿಸಬೇಕು. ನೋಡಲï ಅಽಕಾರಿಗಳು, ತಹಸೀಲ್ದಾರರು, ತಾಪಂ ಇಓಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಮಸ್ಕಿ ಶಾಸಕ ಆರï.ಬಸನಗೌಡ ತುರ್ವಿಹಾಳ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗೆ ಕೂಡಲೇ ಬೊರವೆಲï ಮೂಲಕ ನೀರು ಪೂರೈಸಬೇಕು. ಇತ್ತೀಚೆಗೆ ಆಣಿಕಲï ಮಳೆ ಸುರಿದು ಹಾನಿಗೀಡಾಗಿದ್ದಕ್ಕೆ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದರು.
ಮಸ್ಕಿ ಕ್ಷೇತ್ರz್ದೆ ಪ್ರತ್ಯೇಕವಾಗಿ ಸಭೆ ನಡೆಸಿ ಮಸ್ಕಿ ತಾಲೂಕಿನಲ್ಲಿನ ಜ್ವಲಂತ ಕುಡಿಯುವ ನೀರು ಪೂರೈಕೆಯ ಬಗ್ಗೆ ಚರ್ಚಿಸಿ ಸಮಸ್ಯೆ ಪರಿಹರಿಸಿ. ಸಮಸ್ಯೆ ಇರುವ ಕಡೆಗೆ ವಿಜಿಟï ಮಾಡಿ ಎಂದು ಜಿಪಂ ಸಿಇಓ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಽಕಾರಿ ನಿತೀಶ್ ಕೆ. ಮಾತನಾಡಿ, ಜಿ¯್ಲÁಡಳಿತವು ವಿಶೇಷ ಮುತುವರ್ಜಿ ವಹಿಸಿ ತಾಲೂಕುವಾರು, ಜಿ¯್ಲÁವಾರು ಅಽಕಾರಿಗಳನ್ನು ನಿಯೋಜಿಸಿ ವರದಿ ಪಡೆದು, ಮೇಲಿಂದ ಮೇಲೆ ಅಽಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಪೂರೈಕೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳು ಎಂದು ತಾಲೂಕುವಾರು ರಾಯಚೂರಲ್ಲಿ ೧೫, ದೇವದುರ್ಗದಲ್ಲಿ ೨೫, ಲಿಂಗಸೂಗೂರಿನಲ್ಲಿ ೨೧ ಮತ್ತು ಮಸ್ಕಿಯಲ್ಲಿ ೨೮ ಹಳ್ಳಿಗಳನ್ನು ಗುರುತಿಸಲಾಗಿದೆ. ಲಿಂಗಸೂಗೂರು ತಾಲೂಕಿನಲ್ಲಿ ೨೧ ಹಳ್ಳಿಗಳಲ್ಲಿ ಬಾಡಿಗೆ ಬೋರು ಪಡೆದು ನೀರು ಪೂರೈಸುತ್ತಿದ್ದೇವೆ. ದೇವದುರ್ಗ ತಾಲೂಕಿನಲ್ಲಿ ೨೫ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ ಎಂದು ಆಯಾ ತಾಲೂಕಿನ ತಾಪಂ ಕಾರ್ಯ ನಿರ್ವಹಣಾಽಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ರಾಯಚೂರ ತಾಲೂಕು ವ್ಯಾಪ್ತಿಯಲ್ಲಿನ ಕೆಲವು ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಬೇಕು. ಜಲಜೀವನ ಮಿಷನ್,ಜಲಧಾರೆ ಯೋಜನೆಗಳು ಬಂದ ಬಳಿಕ ಕುಡಿವ ನೀರಿನ ಪೂರೈಕೆಗೆ ಸಂಬAಽಸಿದAತೆ ಸಮರ್ಪಕ ಅನುದಾನ ಸಿಗುತ್ತಿಲ್ಲ. ಸಂಪೂರ್ಣವಾಗಿ ಗ್ರಾಮ ಪಂಚಾಯತï ಮೇಲೆಯೇ ಅವಲಂಬಿತವಾಗಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಅನುದಾನವನ್ನು ಪಂಚಾಯತï ರಾಜ್ಯ ಇಲಾಖೆಯಿಂದ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿz್ದÁಗಿ ಹೇಳಿದರು.\
ಶಾಸಕ ಡಾ.ಎಸ್.ಶಿವರಾಜ ಪಾಟೀಲï ಅವರು ಮಾತನಾಡಿ, ರಾಯಚೂರ ನಗರ ವ್ಯಾಪ್ತಿಯಲ್ಲಿ ಕುಡಿವ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ನಗರಕ್ಕೆ ನೀರು ಪೂರೈಸುವ ಪಂಪಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಜÁಕವೆಲï ಸ್ಟಾರ್ಟ್ ಇಲ್ಲ. ಗಾಳಿ ಮಳೆ ಶುರುವಾದರೆ ವಿದ್ಯುತ್ ಕಡಿತವಾಗಿ ಜೆಸ್ಕಾಂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವಾರದ ಎನ್.ಎಸ್..ಬೋಸರಾಜು, ಸಂಸದ ಜಿ.ಕುಮಾರ ನಾಯಕ,ಶಾಸಕರಾದ ಹಂಪನಗೌಡ ಬಾದರ್ಲಿ, ಜಿ.ಹಂಪಯ್ಯ ನಾಯಕ, ಬಸನಗೌಡ ಬಾದರ್ಲಿ, ಜಿಪಂ ಸಿಇಓ ರಾಹುಲï ತುಕಾರಾಂ ಪಾಂಡ್ವೆ, ಎಸ್ಪಿ ಪುಟ್ಟಮಾದಯ್ಯ ಎಂ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರಾದ ಬಸವಣಪ್ಪ ಕಲಶೆಟ್ಟಿ, ಗಜÁನನ ಬಾಳೆ ಸೇರಿದಂತೆ ಇತರರು ಇದ್ದರು.