ಜಿಲ್ಲೆ

ಪೊಲೀಸ್ ಶಾಂತಿ ಸಭೆ

ಸುನಿಲ್ ಪೊನ್ನೇಟಿ

ಕುಶಾಲನಗರ:

 ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ, ನಗರ ಠಾಣೆಯ ವತಿಯಿಂದ ತಾಲೂಕು ಮಟ್ಟದ  ಹಿಂದೂ, ಮುಸ್ಲಿಮ್ ಸಮುದಾಯದ  ಮುಖಂಡರ       ಶಾಂತಿ ಸಭೆ  ಕುಶಾಲನಗರದ ಸಮುದಾಯದ ಭವನ ಸಭಾಂಗಣದಲ್ಲಿ  ಡಿ. ವೈ.ಎಸ್ .ಪಿ. ಚಂದ್ರಶೇಖರ್  ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

           ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಪೋಲಿಸ್ ಇಲಾಖೆಯ ನಿಯಮಾನುಸಾರ ಮತ್ತು ಕಾನೂನು ನಿಯಮವನ್ನು  ಮೀರದಂತೆ   ಸಂತೋಷದಿಂದ ಆಚರಣೆ ಮಾಡುವಂತ   ಡಿ. ವೈ. ಎಸ್. ಪಿ.  ಚಂದ್ರಶೇಖರ್    ತಿಳಿಸಿದರು.

    ಶಾಂತಿ  ಸಭೆಯಲ್ಲಿ  ಹಿಂದೂ ಮತ್ತು ಮುಸ್ಲಿಂ ಸಮುದಾಯದ  ಪ್ರಮುಖರು ಹಾಜರಿದ್ದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

     ಸಭೆಯಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್,  ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್,  ನಗರ ಠಾಣಾಧಿಕಾರಿ  ಶ್ರೀನಿವಾಸ್,  ಕೈಂ  ವಿಭಾಗದ  ಠಾಣಾಧಿಕಾರಿ ಸ್ವಾಮಿ ಹಾಗೂ ಸಿಬ್ಬಂದಿ ವರ್ಗ ಇದ್ದರು.