ಹುಬ್ಬಳ್ಳಿ: ಇಲ್ಲಿಯ ನೃಪತುಂಗ ಬೆಟ್ಟ ಹತ್ತಿರದ ಪಿರಮಿಡ್ ಧ್ಯಾನ ಮಂದಿರದಲ್ಲಿ ಹುಣ್ಣಿಮೆಯ ನಿಮಿತ್ತ ಶನಿವಾರ ಧ್ಯಾನ ಶಿಬಿರ ಏರ್ಪಡಿಸಲಾಗಿತ್ತು.
ಅತಿಥಿಯಾಗಿದ್ದ ಖ್ಯಾತ ನ್ಯೂರೋ ಸರ್ಜನ್ ಡಾ. ಕ್ರಾಂತಿಕಿರಣ ಮಾತನಾಡಿ, ಧ್ಯಾನದ ಪಯಣ, ಧ್ಯಾನದಿಂದ ಆಗುವ ವೈಜ್ಞಾನಿಕ ಲಾಭಗಳು ಹಾಗೂ ವಿಜ್ಞಾನದ ಕುರಿತು ತಿಳಿಸಿದರು.
ಧ್ಯಾನ ಮಾಡುವುದರಿಂದ ಮೆದುಳಿನ ಮೇಲೆ ಆಗುವ ಪರಿಣಾಮ ಹಾಗೂ ಮಾನಸಿಕ ನೆಮ್ಮದಿ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಪಿರಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಹಿರಿಯ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ, ಸುಮಂಗಲ ಸಾಲಿಮಠ, ನೀಲಕಂಠ ಆಕಳವಾಡಿ, ಬಸವರಾಜ ಹೊಸಮನಿ, ಈಶ್ವರ್ ಕೊಂಗಿ ಮುಂತಾದವರು ಉಪಸ್ಥಿತರಿದ್ದರು. 300ಕ್ಕೂ ಹೆಚ್ಚು ಧ್ಯಾನಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.