ಹುಬ್ಬಳ್ಳಿ: ಶ್ರೀ ರಾಮಚಂದ್ರ ಮಿಶನ್ ಹಾರ್ಟಫುಲ್ ನೆಸ್ ಮೆಡಿಟೇಶನ್ ಸೆಂಟರ್ ಸಹಯೋಗದಲ್ಲಿ ಇಲ್ಲಿಯ ದೇಶಪಾಂಡೆ ನಗರದ ಕುಂಬಕೋಣಂ ಪ್ಲಾಟ್ ಗಾರ್ಡನ್ ನಲ್ಲಿ 3 ದಿನಗಳವರೆಗೆ ಸಹಜ ಧ್ಯಾನ ಮಾರ್ಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಡಾ. ಬಿ.ಆರ್. ಬಾರಕೋಲ್ ಇವರ ನೇತೃತ್ವದಲ್ಲಿ ಧ್ಯಾನ ತರಬೇತಿ ನೀಡಲಾಯಿತು. ಸುಯೋರ್ದಯಕ್ಕೆ ಮೊದಲು ಏಕಾಗ್ರತೆಯಿಂದ ಧ್ಯಾನ ಮಾಡಬೇಕು, ಸಂಜೆ ಮನಸ್ಸಿನಲ್ಲಿ ಇರುವ ಅಹಿತಕರ ಯೋಚನೆಗಳನ್ನು ಶುದ್ಧೀಕರಣ ಮಾಡುವ ಮತ್ತು ರಾತ್ರಿ ಪ್ರಾರ್ಥನೆ ಮಾಡಿ ಮಲಗುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು.
ಕುಂಬಕೋಣಂ ಪ್ಲಾಟ್ ಪದಾಧಿಕಾರಿಗಳಾದ ಸಿ.ಬಿ.ಎಲ್. ಹೆಗಡೆ, ದತ್ತಣ್ಣ ಕಂದಕೂರ, ಮಹಾದೇವಿ, ಸಹನಾ ಮಹಾಲೆ, ಶಶಿಕಲಾ ಶೆಟ್ಟರ್, ಸಪನಾ ಶೆಟ್ಟಿ, ಶಿವಯೋಗಿ ಲಿಂಬಿಕಾಯಿ, ವಿಜಯಕುಮಾರ ಬುರ್ಜಗ, ಗಜಾನನ ಹಬೀಬ, ರಾಜು ಕುಲಕಣಿರ್ ಇತರರು ಭಾಗವಹಿಸಿದ್ದರು.
ಇದೇ ಜಾಗದಲ್ಲಿ ಪ್ರತಿ ಭಾನುವಾರ ಬೆಳಗ್ಗೆ 7.-15ಕ್ಕೆ ಮೆಡಿಟೇಶನ್ ವರ್ಗ ನಡೆಸಿಕೊಡುವುದಾಗಿ ಪ್ರಾಯೋಜಕರಾದ ಡಾ. ಬಿ.ಆರ್. ಬಾರಕೊಲ ಅವರು ತಿಳಿಸಿದರು.
ಸಂಘಟಕ ಪಾಂಡುರಂಗ ಪವಾರ ಸ್ವಾಗತಿಸಿದರು, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ವಂದಿಸಿದರು.