ಬೆಳಗಾವಿಯ ಕೆಎಲ್‌ಇ ಕಾಲೇಜ್ ಆ್ ಾರ್ಮಸಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ. ಸುಚೇತಾ ಬನರ್ಜಿ ಕುರುಂಡ್ಕರ್, ಡಾ. ಸುನೀಲ ಜಲಾಲಪುರೆ, ಡಾ. ಸಮೀರ್ ಮಜಲಿ, ಡಾ. ಅನೀಲ ಕೊರಳ್ಳಿ, ಡಾ. ಭಾಸ್ಕರ ಕುರಂಗಿ ಇದ್ದರು. 
ಜಿಲ್ಲೆ

ಔಷಧ ಅನ್ವೇಷಣೆಯಲ್ಲಿ ಎಐ ಮುಖ್ಯ

ಬೆಳಗಾವಿ: ಔಷಧಗಳ ಅನ್ವೇಷಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪಾತ್ರ ಮುಖ್ಯವಾಗಿದೆ ಎಂದು ಕಾಹೆರ್ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ನಿರ್ದೇಶಕಿ ಡಾ. ಸುಚೇತಾ ಬನರ್ಜಿ ಕುರುಂಡ್ಕರ್ ಹೇಳಿದರು.

ಕರ್ನಾಟಕ ಸರ್ಕಾರದ ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ 2.0 ಸಹಯೋಗದೊಂದಿಗೆ ಬೆಳಗಾವಿಯ ಕೆಎಲ್‌ಇ ಕಾಲೇಜ್ ಆ್ ಾರ್ಮಸಿ ಪೇಟೆಂಟ್ಸ್ ಆ್ಯಂಡ್ ಕಾಪಿರೈಟ್ಸ್ ಕುರಿತು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಕ್ಕುಸ್ವಾಮ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮಕಾರಿಯಾಗಿವೆ. ವಿವಿಧ ಕ್ಷೇತ್ರಗಳಲ್ಲಿ ಪೇಟೆಂಟ್‌ಗಳು ಮತ್ತು ಹಕ್ಕುಸ್ವಾಮ್ಯಗಳ ಪ್ರಾಮುಖ್ಯತೆ, ಔಷಧಾಲಯ ವೃತ್ತಿ ಬೆಳೆಯುತ್ತಿರುವ ವ್ಯಾಪ್ತಿ ಮತ್ತು ಔಷಧ ಅನ್ವೇಷಣೆಯಲ್ಲಿ ಕೃತಕ ಬುದ್ಧಿಮತ್ತೆ ಪಾತ್ರ ವಿವರಿಸಿದರು.

ಪ್ರಾಚಾರ್ಯ ಡಾ. ಸುನೀಲ ಜಲಾಲಪುರೆ, ಬೌದ್ಧಿಕ ಆಸ್ತಿಯನ್ನು ರಕ್ಷಿಸುವಲ್ಲಿ, ನಾವೀನ್ಯತೆ ಪ್ರೋತ್ಸಾಹಿಸುವಲ್ಲಿ ಪೇಟೆಂಟ್ ಮತ್ತು ಹಕ್ಕುಸ್ವಾಮ್ಯಗಳ ನಿರ್ಣಾಯಕ ಪಾತ್ರದ ಕುರಿತು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಗ್ರೀನ್ ಸೇವಿಯರ್ ಅಸೋಸಿಯೇಷನ್ ಸಂಸ್ಥಾಪಕ ಡಾ. ಸಮೀರ್ ಮಜಲಿ, ಡಾ. ಅನಿಲ ಕೊರಳ್ಳಿ ಮತ್ತು ಡಾ. ಭಾಸ್ಕರ ಕುರಂಗಿ ಅವರು ಪೇಟೆಂಟ್‌ಗಳು ಮತ್ತು ಹಕ್ಕುಸ್ವಾಮ್ಯಗಳ ಕರಡು ರಚನೆಯ ಕಾರ್ಯವಿಧಾನಗಳನ್ನು ವಿವರಿಸಿದರು. ಉಪಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ, ಡೀನ್ ಡಾ. ವಿ.ಎಸ್. ಮಾಸ್ತಿಹೋಳಿಮಠ ಮತ್ತು ಬೆಳಗಾವಿಯ ಕೆಎಲ್‌ಇ ಕಾಲೇಜ್ ಆ್ ಾರ್ಮಸಿಯ ಎಲ್ಲ ಅಧ್ಯಾಪಕರು ಇದ್ದರು. 50 ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೋಹನ್ ಸಿಂಗಾಡಿ ವಂದಿಸಿದರು.