ಪಡುಬಿದ್ರಿ: ಹೆಜಮಾಡಿಕೋಡಿ ವಿದ್ಯಾಪ್ರಸಾರ ಹಳೇ ವಿದ್ಯಾರ್ಥಿ ಸಂಘದ ಅಂಗ ಸಂಸ್ಥೆ ಕೋಡಿ ಕ್ರಿಕೆಟರ್ಸ್ ಮತ್ತು ಮಂಗಳೂರು ಎ.ಜೆ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಜೂನ್ 9ರಂದು ಹೆಜಮಾಡಿಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ-ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ನಡೆಯಲಿದೆ.
ಸ್ತ್ರೀರೋಗ ತಜ್ಞೆ ಡಾ.ಕವಿತಾ ಡಿಸೋಜ ನೇತೃತ್ವದಲ್ಲಿ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಮಹಿಳಾ ವಿಭಾಗದಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ವೈದ್ಯಕೀಯ ಉಚಿತ ಶಿಬಿರದಲ್ಲಿ ಗರ್ಭಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ರಕ್ತಹೀನತೆ, ಮಧುಮೇಹ ತಪಾಸಣೆ, ಚರ್ಮ ಪರೀಕ್ಷೆ, ಸಾಮಾನ್ಯ ರೋಗ ಪರೀಕ್ಷೆ, ಹೃದಯ ಸಂಬಂಧಿ ಕಾಯಿಲೆ ಹಗೂ ಇಸಿಜಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.