ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನೀಟ್&2020 ವೈದ್ಯಕಿಯ ಮತ್ತು ದಂತವೈದ್ಯಕಿಯ ಕೋರ್ಸ್ಗಳ ಪ್ರವೇಶಕ್ಕೆ ಶುಲ್ಕದ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ವೆಬ್ಸೈಟ್ಗೆ ಭೇಟಿ ನೀಡಿ ಕೋರ್ಸ್ ಮತ್ತು ಕಾಲೇಜು ಆಯ್ಕೆ ಮಾಡಿದಲ್ಲಿ ಕಾಲೇಜಿನ ಬೋಧನಾ ಶುಲ್ಕ, ಹಾಸ್ಟೆಲ್, ಊಟ, ಸಾರಿಗೆ ವ್ಯವಸ್ಥೆ ಎಲ್ಲ ಶುಲ್ಕದ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಈಗಾಗಲೇ ಕೆಇಎ ನ.25ರಂದೇ ಸೀಟು ಹಂಚಿಕೆ ಮಾಡಿ ಲಿತಾಂಶ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಸೀಟು ಖಚಿತ ಪಡಿಸಿಕೊಂಡು ಕಾಲೇಜುಗಳಿಗೆ ದಾಖಲಾಗಬೇಕಿದೆ. ಈ ವೇಳೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಶುಲ್ಕದ ಮಾಹಿತಿ ಬಿಡುಗಡೆ ಮಾಡಿದೆ.
ಯುಜಿ ಸಿಇಟಿ: ಯುಜಿ ಸಿಇಟಿ ಅಣಕು ಸೀಟು ಹಂಚಿಕೆಯ ಲಿತಾಂಶವನ್ನು ಬಿಡುಗಡೆ ಮಾಡಿದ್ದು, ಆಪ್ಷನ್ ಎಂಟ್ರಿ ತಿದ್ದುಪಡಿಗಾಗಿ ಡಿ.1 ಬೆಳಗ್ಗೆ 11 ಗಂಟೆಯವರೆಗೂ ಸಮಯ ನೀಡಿದೆ. ವಿದ್ಯಾರ್ಥಿಗಳು ಹಾಲಿ ಸಲ್ಲಿಸಿರುವ ಆಪ್ಷನ್ ಅನ್ನು ಬದಲು ಮಾಡಿಕೊಳ್ಳಬಹುದು. ಹೊಸದಾಗಿಯೂ ಸಲ್ಲಿಸಬಹುದು. ಇದರ ಆಧಾರದ ಮೇಲೆ ಡಿ.2ರಂದು ಸಂಜೆ 6ಗಂಟೆಗೆ ನೈಜ ಸೀಟು ಹಂಚಿಕೆಯ ಲಿತಾಂಶವನ್ನು ಬಿಡುಗಡೆ ಮಾಡಲಿದೆ. ಇದಾದ ಮೇಲೆ ದಾಖಲಾತಿ ವೇಳಾಪಟ್ಟಿಯನ್ನು ಶ್ರೀದಲ್ಲೇ ಬಿಡುಗಡೆ ಮಾಡುವುದಾಗಿ ಕೆಇಎ ಹೇಳಿದೆ.