ಜಿಲ್ಲೆ

ಪತ್ರಕರ್ತರ ಕ್ರಿಕೆಟ್ ಪಂದ್ಯಾಟ; ’ಟೀಂ ಸರ್ಜಿಕಲ್’ ತಂಡ ಚಾಂಪಿಯನ್

reportermys

ಮಡಿಕೇರಿ: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ವತಿಯಿಂದ ಮಡಿಕೇರಿ ನಗರ ಪತ್ರಕರ್ತರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ’ಮಡಿಕೇರಿ ಮೀಡಿಯ ಕ್ರಿಕೆಟ್ ಕಪ್’ನಲ್ಲಿ ’ಟೀಂ ಸರ್ಜಿಕಲ್’ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಪಂದ್ಯಾಟದಲ್ಲಿ ಅನು ಕಾರ್ಯಪ್ಪ ಮಾಲೀಕತ್ವದ ಟೀಂ ಸರ್ಜಿಕಲ್, ರಾಕೇಶ್ ಮಾಲೀಕತ್ವದ ರಾಯಲ್ ಚಾಲೆಂಜರ್ಸ್‌ ಮಡಿಕೇರಿ, ಸಂತೋಷ್ ರೈ ಮಾಲೀಕತ್ವದ ರಾಯಲ್ ಸ್ಟ್ರೈಕರ್ಸ್‌ ತಂಡ ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಸರ್ಜಿಕಲ್ ಮತ್ತು ರಾಯಲ್ ಚಾಲೆಂಜರ್ಸ್‌ ಮಡಿಕೇರಿ ತಂಡ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತ ಟೀಂ ಸರ್ಜಿಕಲ್ ತಂಡ ನಿಗದಿತ ೮ ಓವರ್‌ನಲ್ಲಿ ೨ ವಿಕೇಟ್ ಕಳೆದುಕೊಂಡು ೧೨೫ ರನ್ ಕಲೆ ಹಾಕಿತು. ತಂಡ ಪರ ಕೆ.ಎ.ಆದಿತ್ಯ ೩೪, ಆದರ್ಶ್ ಅದ್ಕಲೇಗಾರ್ ೫೨ ರನ್ ದಾಖಲಿಸಿ ತಂಡದ ಮೊತ್ತವನ್ನು ನೂರರಗಡಿ ದಾಟಿಸುವಲ್ಲಿ ಸಫಲರಾದರು. ಗುರಿಬೆನ್ನತ್ತಿದ ರಾಯಲ್ ಚಾಲೆಂಜರ್ಸ್‌ ಮಡಿಕೇರಿ ತಂಡ ೪ ವಿಕೆಟ್ ಕಳೆದುಕೊಂಡು ೧೧೫ ರನ್ ದಾಖಲಿಸಿ, ೯ ರನ್‌ಗಳಿಂದ ಪರಾಭವಗೊಂಡ ಪರಿಣಾಮ ದ್ವಿತೀಯ ಸ್ಥಾನ ತೃಪ್ತಿಪಟ್ಟುಕೊಂಡಿತು.

ವೈಯುಕ್ತಿಕ ಪ್ರಶಸ್ತಿ: ಬೆಸ್ಟ್ ವುಮೆನ್ ಪ್ಲೇಯರ್ ಮತ್ತು ಪೈನಲ್ ಪಂದ್ಯಾಟದ ಬೆಸ್ಟ್ ಬೌಲರ್ ಪ್ರಶಸ್ತಿ-ಟೀಂ ಸರ್ಜಿಕಲ್ ತಂಡದ ಚಿತ್ರ ನಾಣಯ್ಯ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ಆದರ್ಶ್ ಅದ್ಕಲೇಗಾರ್, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ಕೆ.ಎ.ಆದಿತ್ಯ, ಬೆಸ್ಟ್ ಬೌಲರ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ದಿವಾಕರ್(ಜಾಕಿ), ಹಿರಿಯ ಆಟಗಾರ ಪ್ರಶಸ್ತಿ-ಟೀಂ ಸರ್ಜಿಕಲ್ ತಂಡದ ಬಿ.ಸಿ.ದಿನೇಶ್, ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಪ್ರಶಸ್ತಿ-ರಾಯಲ್ ಚಾಲೆಂಜರ್ಸ್‌ ಮಡಿಕೇರಿ ತಂಡದ ಪ್ರೇಮ್ ಕುಮಾರ್, ಬೆಸ್ಟ್ ಕ್ಯಾಚರ್ ಪ್ರಶಸ್ತಿ-ರಾಯಲ್ ಚಾಲೆಂಜರ್ಸ್‌ ಮಡಿಕೇರಿ ತಂಡದ ವಿಶ್ಮಪೆಮ್ಮಯ್ಯ ಪಡೆದುಕೊಂಡರು.