ಮೇದಾರ ಸಮುದಾಯಕ್ಕೆ ಆರ್ಥಿಕ ನೆರವು ನೀಡುವ ಜತೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಮೇದ ಗಿರಿಜನಾಂಗದ ಸೇವಾ ಸಂಘದ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವೈ.ಕೆ.ಹಳಪೇಟಿ, ನಾಗೇಶ ಕಡೋಲಿ, ಪಿ.ಮಂಜುನಾಥಕುಮಾರ್, ಅಪ್ಪಯ್ಯ ಬುರುಡ, ಫಕೀರಪ್ಪ ಮುರಗೋಡ ಇತರರು ಇದ್ದರು. 
ಜಿಲ್ಲೆ

ಮೇದಾರ ಸಮುದಾಯಕ್ಕೆ ಆರ್ಥಿಕ ನೆರವು ನೀಡಿ

ಬೆಳಗಾವಿ: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೇದಾರ ಸಮುದಾಯಕ್ಕೆ ಆರ್ಥಿಕ ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಮೇದ ಗಿರಿಜನಾಂಗದ ಸೇವಾ ಸಂಘದ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

ಬಿದಿರಿನ ಪೂರೈಕೆ ಹಾಗೂ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ಮತ್ತು ಮಾರುಕಟ್ಟೆ ಲಭ್ಯವಿಲ್ಲದ್ದರಿಂದ ನಮ್ಮ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇದಾರ ಜನಾಂಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಅಖಿಲ ಕರ್ನಾಟಕ ಮೇದ ಗಿರಿಜನಾಂಗದ ಸೇವಾ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ವೈ.ಕೆ. ಹಳಪೇಟಿ, ಉಪಾಧ್ಯಕ್ಷ ನಾಗೇಶ ಕಡೋಲಿ, ಕಾರ್ಯದರ್ಶಿ ಪಿ.ಮಂಜುನಾಥಕುಮಾರ್, ಸದಸ್ಯರಾದ ಅಪ್ಪಯ್ಯ ಬುರುಡ, ಫಕೀರಪ್ಪ ಎಂ. ಮುರಗೋಡ ಇತರರಿದ್ದರು.