ಇಳಕಲ್ಲದ ಅಕ್ಕನ ಬಳಗದ ವತಿಯಿಂದ ಶಿವಶರಣ ಮೇದಾರ ಕೇತಯ್ಯ ಜಯಂತಿ ಆಚರಿಸಲಾಯಿತು. ನಿರ್ದೇಶಕಿ ಲತಾ ಚಂದ್ರಹಾಸ, ಅರ್ಬನ್ ಬ್ಯಾಂಕ್ ನಿರ್ದೇಶಕ ಡಾ. ಅರುಣಾ ಅಕ್ಕಿ, ಲತಾ ಹೇರೂರ, ನಿವೃತ್ತ ಶಿಕ್ಷಕಿಯರಾದ ನಾಗರತ್ನ ಕಾಚಟ್ಟಿಯವರ ಇತರರಿದ್ದರು. 
ಜಿಲ್ಲೆ

ವಚನಗಳ ಮೂಲಕ ಮನುಕುಲದ ಸೇವೆ ಮಾಡಿದ ಮೇದಾರ ಕೇತಯ್ಯ

ಇಳಕಲ್ಲ: ಇಲ್ಲಿನ ಅಕ್ಕನ ಬಳಗದ ವತಿಯಿಂದ ಶಿವಶರಣ ಮೇದಾರ ಕೇತಯ್ಯನವರ ಜಯಂತಿ ಆಚರಿಸಲಾಯಿತು.

ಇಳಕಲ್ಲ ಅರ್ಬನ್ ಬ್ಯಾಂಕ್ ನಿರ್ದೇಶಕಿ ಲತಾ ಚಂದ್ರಹಾಸ ಮಾತನಾಡಿ, ಪುಟ್ಟಿಗಳನ್ನು ಹೆಣೆಯುವ ಕಾಯಕ ಮಾಡುತ್ತಲೇ ಮೇದಾರ ಕಕ್ಕಯ್ಯ ವಿಶ್ವಗುರು ಬಸವಣ್ಣನವರ ಜೊತೆಗೂಡಿ ಹಲವಾರು ವಚನಗಳನ್ನು ರಚಿಸಿ ಮನುಕುಲದ ಸೇವೆ ಮಾಡಿದ್ದಾರೆ ಎಂದು ಹೇಳಿದರು.

ಅರ್ಬನ್ ಬ್ಯಾಂಕ್ ನಿರ್ದೇಶಕ ಡಾ. ಅರುಣಾ ಅಕ್ಕಿ, ಲತಾ ಹೇರೂರ, ನಿವೃತ್ತ ಶಿಕ್ಷಕಿಯರಾದ ನಾಗರತ್ನ ಕಾಚಟ್ಟಿಯವರ, ದಾಕ್ಷಾಯಣಿ ಗಡೇದ, ಎಸ್. ಆರ್. ಕಂಠಿ, ವೇದಿಕೆ ಅಧ್ಯಕ್ಷೆ ಮಹಾದೇವಿ ತೊಂತನಾಳ ಇವರನ್ನು ಸತ್ಕರಿಸಿ ಗೌರವಿಸಲಾಯಿತು.

ಅಕ್ಕನಬಳಗದ ಅಧ್ಯಕ್ಷೆ ಸವಿತಾ ಮಾಟೂರ ಅಧ್ಯಕ್ಷತೆ ವಹಿಸಿದ್ದರು.

ಹಂಪಮ್ಮ ಮರಟದ, ಶಾಂತಾ ಸಜ್ಜನ, ಶಕುಂತಲಾ ಚೋಬಾರಿ, ವಿಜಯಲಕ್ಷ್ಮೀ ಹರಿಹರ, ಅಕ್ಕಮ್ಮ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರತಿಭಾ ಅಲೇಗಾವಿ ಕಾರ್ಯಕ್ರಮ ನಡೆಸಿಕೊಟ್ಟರು.