ಜಿಲ್ಲೆ

ಜ.7ರಂದು ಮೇದಾರ ಸಮಾವೇಶ

Chitradurga

ಜ.7ರಂದು ದುರ್ಗದಲ್ಲಿ ಅಖಿಲ ಭಾರತ ಮೇದಾರ ಪರಿಶಿಷ್ಟ ಪಂಗಡದ ಬುಡಕಟ್ಟು ಬೃಹತ್ ಸಮಾವೇಶ ನೂತನ ಕಟ್ಟಡ ಉದ್ಘಾಟನೆ,ಕೇಂದ್ರ ಸಚಿವರು,ಮಠಾಧೀಶರು,ಶಾಸಕರು ಭಾಗಿ

ಚಿತ್ರದುರ್ಗ: ಸೀಬಾರ ಶ್ರೀ ಮೇದಾರ ಕೇತೇಶ್ವರ ಗುರು ಪೀಠದಲ್ಲಿ ಜನವರಿ 7ರಂದು ಅಖಿಲ ಭಾರತ ಮೇದಾರ ಪರಿಶಿಷ್ಟ ಪಂಗಡದ ಬುಡಕಟ್ಟು ಬೃಹತ್ ಸಮಾವೇಶ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಮೇದಾರ ಕೇತೇಶ್ವರ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಸ್ವಾಮೀಜಿ ಹೇಳಿದರು.

ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸ್ವಾಮೀಜಿ,ಅಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸಮಾವೇಶ ಉದ್ಘಾಟಿಸಲಿದ್ದಾರೆ. ನಾಡಿನ 30 ವಿವಿಧ ಮಠಾಧೀಶರು,ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್,ಭಗವಂತ್‌ಖೂಬಾ,ಪ್ರಲ್ಹಾದ್‌ಜೋಶಿ,ಎ.ನಾರಾಯಣಸ್ವಾಮಿ,ಶೋಭಾಕರಂದ್ಲಾಜೆ,ಜಿಲ್ಲೆಯ ಶಾಸಕರು ಆಗಮಿಸುವ ಈ ಸಮಾವೇಶದಲ್ಲಿ ರಾಜ್ಯ,ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. 25 ಸಾವಿರ ಮಹಿಳೆಯರಿಗೆ ಉಡಿ ತುಂಬಲಾಗುವುದು.

ಆರ್ಥಿಕ,ಸಾಮಾಜಿಕ,ಶೈಕ್ಷಣಿಕ ಆಗ ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಆದಿವಾಸಿ ಬುಡಕಟ್ಟಿಗೆ ಸೇರಿದ ನಮ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರ ಸತತ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿ,ಪಂಗಡದ ಮೀಸಲು ಪ್ರಮಾಣ ಹೆಚ್ಚಾಗಿದೆ.

ಇದಕ್ಕಾಗಿ ಬಸವರಾಜ ಬೊಮ್ಮಾಯಿಗೆ ಅವರಿಗೆ ಸಮಾವೇಶದಲ್ಲಿ ಕೃತಜ್ಞತೆ ಸಲ್ಲಿಸಲಾಗುವುದು ಎಂದರು. ಉಮೇಶ್,ಕೆ.ಎನ್.ಮಂಜುನಾಥ್,ಶ್ರೀನಿವಾಸ್,ಲೋಕೇಶ್ ಇದ್ದರು.