ಚೆಂಡಿನಗದ್ದೆಯಲ್ಲಿ 2.50 ಎಕರೆ ಗದ್ದೆಯಲ್ಲಿ 4ನೇ ವರ್ಷದ ಭದ್ರತಳಿಯ ಯಾಂತ್ರೀಕೃತ ಭತ್ತ ನಾಟಿಗೆ ಶಾಸಕ ರಾಜೇಶ್ ನಾಯ್ಕ್ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದರು. 
ಜಿಲ್ಲೆ

ಭತ್ತದ ಕೃಷಿಯಿಂದ ಉತ್ತಮ ಆದಾಯ : ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿಕೆ

ಸೌಮ್ಯ ಆರ್

ಬಂಟ್ವಾಳ: ಕೃಷಿ ಇಲಾಖೆ ಹಾಗೂ ಊರಿನವರ ಸಹಕಾರದಿಂದ ಭತ್ತದ ಕೃಷಿ ನಾಟಿ ಮಾಡಲಾಗಿದೆ. ಕಳೆದ ಬಾರಿ ಮಾಡಿದ ಕೃಷಿ ಮೂಲಕ ಸುಮಾರು 95 ಸಾವಿರ ರೂ. ದೇವಸ್ಥಾನಕ್ಕೆ ಉಳಿತಾಯವಾಗಿದ್ದು, ಇದರ ಭತ್ತದ ಹುಲ್ಲು ಸ್ಥಳೀಯ ಅನೇಕ ಕೃಷಿಕರಿಗೆ ಉಪಯೋಗವಾಗಿದೆ. ಭತ್ತದ ಕೃಷಿಯಿಂದ ಹೆಕ್ಟೇರ್‌ಗೆ 80 ಸಾವಿರ ರೂ.ಲಾಭ ಗಳಿಸುವುದು ನಿಜಕ್ಕೂ ಉತ್ತಮ ಆದಾಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಬಂಟ್ವಾಳ ಕೃಷಿ ಇಲಾಖೆ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ 2.50 ಎಕರೆ ಗದ್ದೆಯಲ್ಲಿ 4ನೇ ವರ್ಷದ ಭದ್ರ ತಳಿಯ ಯಾಂತ್ರೀಕೃತ ಭತ್ತ ನಾಟಿಗೆ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿ ಮಾತನಾಡಿದರು.

ಕೃಷಿಕರಾದ ಪೂವಪ್ಪ ಪೂಜಾರಿ, ನಳಿನಾಕ್ಷಿ, ಸುಧಾಕರ ಸಪಲ್ಯ ಅವರಿಗೆ ಸಾಂಕೇತಿಕವಾಗಿ ಮಣ್ಣು ಆರೋಗ್ಯ ಚೀಟಿ ವಿತರಣೆ ನಡೆಸಲಾಯಿತು. ಪ್ರಮುಖರಾದ ಸುದರ್ಶನ ಬಜ, ವೆಂಕಟೇಶ ನಾವಡ, ಸುಕೇಶ್ ಚೌಟ, ಕಾರ್ತಿಕ್ ಬಲ್ಲಾಳ್, ಚಂದ್ರಶೇಖರ್ ಶೆಟ್ಟಿ, ಯಶವಂತ ಪೊಳಲಿ, ಚಂದ್ರಾವತಿ ಪೊಳಲಿ, ಯಶೋದಾ ಕಲ್ಕುಟ್ಟ, ಲೋಕೇಶ್ ಭರಣಿ, ನವೀನ ಕಟ್ಟಪುಣಿ, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಮಂಗಳೂರು ಉಪವಿಭಾಗ ಉಪ ಕೃಷಿ ನಿರ್ದೇಶಕಿ ಕುಮುದ, ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಕೃಷಿ ಅಧಿಕಾರಿ ನಂದನ್ ಶೆಣೈ, ಆತ್ಮ ಯೋಜನೆ ತಾಂತ್ರಿಕ ಅಧಿಕಾರಿ ಹನುಮಂತ ಕಾಳಗಿ, ಕೃಷಿ ಸಖಿ ಗೀತಾ, ಪಶು ಸಖಿ ಸುಜಾತಾ ಉಪಸ್ಥಿತರಿದ್ದರು.