ಜಿಲ್ಲೆ

ಜೂ.1ರಿಂದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ಪ್ರಶಾಂತ ಜಿ. ಭಾಗ್ವತ

ಜು.31ರ ವರೆಗೆ ಸ್ಥಗಿತ

61 ದಿನ ಬಂದರು ಸ್ತಬ್ಧ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕ ಕಡಲ ಮೀನುಗಾರಿಕಾ ನಿಯಂತ್ರಣ ಕಾಯಿದೆ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬಲೆ, ಸಾಧನ ಉಪಯೋಗಿಸಿ 10 ಎಚ್​ಪಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್​ಬೋರ್ಡ್​ ಅಥವಾ ಔಟ್​ಬೋರ್ಡ್​ ಯಂತ್ರ ಅಳವಡಿಸಿರುವ ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕೆಯನ್ನು ಜೂ.1ರಿಂದ ಜು.31ರ ವರೆಗೆ (ಒಟ್ಟು 61) ನಿಷೇಧಿಸಲಾಗಿದೆ.

10 ಎಚ್​ಪಿ ವರೆಗಿನ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಿಕ, ನಾಡದೋಣಿಗಳಿಗೆ ಕರಾವಳಿ ಮೀನುಗಾರಿಕೆ ಕೈಗೊಳ್ಳಲು ಅನುಮತಿ ನೀಡಲಾಗಿದೆ.

ಹವಾಮಾನದ ಮುನ್ಸೂಚನೆಯನ್ನು ಎಲ್ಲ ಮೀನುಗಾರರು ಕಡ್ಡಾಯವಾಗಿ ಪಾಲಿಸಬೇಕು. ನಿಷೇಧ ಹೇರಿದ್ದರಿಂದ ಎಲ್ಲ ಬೋಟ್​ಗಳನ್ನು ಮೇ 31ರ ಒಳಗಾಗಿ ಬಂದರು ಪ್ರವೇಶ ಮಾಡಬೇಕು. ತದನಂತರ ಬರುವ ಬೋಟ್​ಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದೇಶ ಉಲ್ಲಂಘಿಸುವ ಮೀನುಗಾರರಿಗೆ ದಂಡದೊಂದಿಗೆ ಒಂದು ವರ್ಷದ ಅವಧಿಗೆ ಡೆಲಿವರಿ ಪಾಯಿಂಟ್​ನಲ್ಲಿ ರಾಜ್ಯ ಮಾರಾಟ ಕರ ರಹಿತ ಡೀಸೆಲ್​ ಪಡೆಯಲು ಅನರ್ಹರಾಗುತ್ತಾರೆ. ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ ಆರ್​. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.