ಜಿಲ್ಲೆ

ಎಸ್‌ಡಿಎಂ ಕಾಲೇಜಿನಲ್ಲಿ `ಮೆಕ್ ಪ್ರೊ- 2025'

ವಿಜಯವಾಣಿ ಸುದ್ದಿಜಾಲ ಧಾರವಾಡ

ಮೆಕ್ಯಾನಿಕಲ್ ಇಂಜಿನಿಯರಿ0ಗ್‌ನಲ್ಲಿ ನವೀನ ಆಲೋಚನೆಗಳು, ಪರಿಕಲ್ಪನೆಗಳು, ವಿನ್ಯಾಸಗಳನ್ನು ಪರಿಚಯಿಸುವ `ಮೆಕ್ ಪ್ರೊ- 2025' ಟೆಕ್ನಿಕಲ್ ಪ್ರಾಜೆಕ್ಟ್ ಪ್ರದರ್ಶನವನ್ನು ನಗರದ ಎಸ್‌ಡಿಎಂ ಇಂಜಿನಿಯರಿAಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಿಂದ ಮಂಗಳವಾರ ಆಯೋಜಿಸಲಾಗಿತ್ತು.

ಎಸ್‌ಡಿಎಂ ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ ಮೆಕ್ ಪ್ರೊ- 25 ಪ್ರದರ್ಶನ ಉದ್ಘಾಟಿಸಿದರು. ಇಲೆಕ್ಟಿçಕಲ್- ಹೈಬ್ರಿಡ್ ವೆಹಿಕಲ್ ಟೆಕ್ನಾಲಜಿ, ಕೃಷಿ ಉತ್ಪನ್ನಗಳಾದ ಶುಗರ್ ಸ್ಯಾಂಪ್ಲಿ0ಗ್ ಪ್ಲಾಂಟೇಶನ್ ಯಂತ್ರ, 3ಡಿ ಸ್ಕ್ಯಾನಿಂಗ್ ಯಂತ್ರ, ಟೂತ್ ಬೈಟ್ ಬಲಮಾಪನ, ಡ್ರೋನ್ ಕಣ್ಗಾವಲು ವ್ಯವಸ್ಥೆ ಸೇರಿ ಸುಮಾರು 40 ವಿದ್ಯಾರ್ಥಿ ಯೋಜನೆಗಳು, 50ಕ್ಕೂ ಹೆಚ್ಚು ಪ್ರಾಜೆಕ್ಟ್ಗಳು ಪ್ರದರ್ಶನಗೊಂಡವು.

ವಿವಿಧ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು, ಪಾಲಕರು, ಮೆಕ್ಯಾನಿಕಲ್ ಇಂಜಿನಿಯರಿ0ಗ್‌ನ ವಿಶೇಷತೆಗಳನ್ನು ವೀಕ್ಷಿಸಿದರು. ಮೆಕ್ಯಾನಿಕಲ್ ಇಂಜಿನಿಯರಿ0ಗ್‌ನಲ್ಲಿರುವ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಅವಕಾಶಗಳ ಬಗ್ಗೆ ಸಂವಾದದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.

ಪ್ರಾಚಾರ್ಯ ಡಾ. ಆರ್.ಎಲ್. ಚಕ್ರಸಾಲಿ, ವಿಭಾಗದ ಮುಖ್ಯಸ್ಥ ಡಾ. ಅನಿಲಕುಮಾರ ಎಚ್.ಸಿ. ಇತರರಿದ್ದರು.