ಜಿಲ್ಲೆ

ಯುಗಾದಿಯಲ್ಲಿ ಗುಡ್ಡೆಮಾಂಸ ಮಾರಾಟ ನಿಷೇಧ; ಬಿಬಿಎಂಪಿ ಆಯುಕ್ತರ ಸೂಚನೆ

Mandara

ಬೆಂಗಳೂರು: ಕರೊನಾ ಸೋಂಕು ಹರಡುವಿಕೆ ತಡೆಯಲು ಅವಿರತ ಶ್ರಮಿಸು ತ್ತಿರುವ ಬಿಬಿಎಂಪಿ, ಯುಗಾದಿಗೆ ಆಚರಿಸುವ ಹೊಸತೊಡಕು ದಿನದಂದು ಗುಡ್ಡೆಮಾಂಸ ಮಾರಾಟ ನಿಷೇಧಿಸಿದೆ.

ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿ ಯಲ್ಲಿ ಹಾಗೂ ವಿಶೇಷವಾಗಿ ಹೊರವಲಯದ 110 ಹಳ್ಳಿಗಳು ಸೇರಿ ಎಲ್ಲೆಡೆ ಗುಡ್ಡೆಮಾಂಸ ಮಾರಾಟ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಆಯುಕ್ತ ಅನಿಲ್​ಕುಮಾರ್ ತಿಳಿಸಿದ್ದಾರೆ.

ಸಾರ್ವಜನಿಕರು ಪ್ರಾಣಿ ಬಲಿ ಕೊಟ್ಟು ನಂತರ ಅವರೇ ಮಾಂಸ ಕತ್ತರಿಸಿ ಮಾರಾಟ ಮಾಡುವಾಗ ಹೆಚ್ಚು ಜನಸಂದಣಿ ಆಗುತ್ತದೆ. ಮಾಂಸ ಕತ್ತರಿಸುವ ವ್ಯಕ್ತಿ ಅಥವಾ ಗ್ರಾಹಕರಿಗೆ ಸೋಂಕು ಇದ್ದರೆ ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಜತೆಗೆ ಪ್ರಾಣಿಗಳಿಗೆ ಕರೊನಾ ಸೇರಿ ಯಾವುದಾದರೂ ಸೋಂಕು ಇದ್ದರೆ ಅದರಿಂದಲೂ ತೊಂದರೆ ಆಗುತ್ತದೆ. ಹಾಗಾಗಿ ಪಾಲಿಕೆಯ ಪ್ರಾಣಿ ವಧಾ ಕೇಂದ್ರದಲ್ಲಿ ವಧೆ ಮಾಡಿದ ಹಾಗೂ ಅಧಿಕೃತ ಮಾಂಸ ಮಾರಾಟ ಕೆಂದ್ರಗಳಲ್ಲಿ ಮಾಂಸ ಖರೀದಿಸಬೇಕು ಎಂದು ಸೂಚಿಸಿದ್ದಾರೆ.