ಜಿಲ್ಲೆ

ಸಮರ್ಪಕ ತ್ಯಾಜ್ಯ ವಿಲೇಗೆ ಕ್ರಮ

ಇಂದಿರಾ ಎನ್ ಕೆ

ಕುಂದಾಪುರ: ತ್ಯಾಜ್ಯ ವಿಲೇವಾರಿ ಕುರಿತಾದ ದೂರುಗಳಿಗೆ ಮುಂದಿನ ಸಭೆಗಳಲ್ಲಿ ಪರಿಹಾರಕ್ಕೆ ಯತ್ನಿಸಲಾಗುವುದು. 15ನೇ ಹಣಕಾಸು ಯೋಜನೆಯಲ್ಲಿ ಜಿಲ್ಲೆಯಲ್ಲಿ ಉಳಿಕೆಯಾದ 25 ಕೋ.ರೂ.ಗಳನ್ನು ತ್ಯಾಜ್ಯ ವಿಲೇ ಟಕ ನಿರ್ವಹಣೆ, ವಾಹನ ಖರೀದಿ, ಸಿಬಂದಿ ವೇತನಕ್ಕೆ ಬಳಸಲು ಅವಕಾಶ ನೀಡಬೇಕು. ಹಸಿಕಸ, ಒಣಕಸ ಮನೆ ಮನೆಗಳಿಂದ ಸಂಗ್ರಹಿಸಿ ವಿಲೇ ವಾಡುವ ಕೆಲಸ ಪ್ರತಿ ಪಂಚಾಯಿತಿಯಿಂದ ಕಡ್ಡಾಯವಾಗಿ ನಡೆಯಬೇಕು. ಅಸಮರ್ಪಕವಾಗಿ ನಡೆದರೆ ಅಂತಹ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸ್ಸು ವಾಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂದಾಪುರ ತಾಲೂಕು ಪಂಚಾಯಿತಿನಲ್ಲಿ ಮಂಗಳವಾರ ತ್ಯಾಜ್ಯ ವಿಲಾವೇರಿ ಕುರಿತು ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರದ 35 ಪಂಚಾಯಿತಿಗಳ ಪಿಡಿಒ, ಅಧ್ಯಕ್ಷರ ಸಭೆಯಲ್ಲಿ ವಾತನಾಡಿದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಡಾ.ಉದಯಕುವಾರ್ ಶೆಟ್ಟಿ ಮಾತನಾಡಿ, ತ್ಯಾಜ್ಯ ವಿಲೇಗೆ ಎಲೆಕ್ಟ್ರಿಕ್ ವಾಹನ ಖರೀದಿಸಿ. ಇದರಿಂದ ಆರಂಭಿಕ ವೆಚ್ಚ ಹೆಚ್ಚಾದರೂ ನಿರ್ವಹಣೆ ವೆಚ್ಚ ಕಡಿಮೆಯಾಗುತ್ತದೆ ಎಂದರು. ಕೆಲವೆಡೆ ತ್ಯಾಜ್ಯ ವಿಲೇವಾರಿಗೆ ಸಿಬ್ಬಂದಿ ಸಿಗುತ್ತಿಲ್ಲ ಎಂದು ಪಿಡಿಒಗಳು ಹೇಳಿದಾಗ, ಸಂಸದರು ಹಾಗೂ ಸಿಇಒ, ಕನಿಷ್ಠ ವೇತನ ಎಂದು ಸರ್ಕಾರ ವಾರ್ಗಸೂಚಿ ನೀಡಿದ್ದರೂ ಅಷ್ಟೇ ನೀಡಬೇಕು ಎಂದಿಲ್ಲ. ಅದಕ್ಕಿಂತ ಕಡಿಮೆಯಾಗಬಾರದು ಎಂದರ್ಥ. 11ರಿಂದ 15 ಸಾವಿರ ರೂ. ವೇತನ ನೀಡಲಾಗುತ್ತಿದೆ ಎಂದರು. ರಾಜ್ಯ ಮಾದರಿ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ವಂಡ್ಸೆಯಲ್ಲಿ ಇರುವ ಎಸ್‌ಎಲ್‌ಆರ್‌ಎಂ ಟಕ ಚೆನ್ನಾಗಿದ್ದು ಅದೇ ವಾದರಿಯಲ್ಲಿ ಜಿಲ್ಲೆಯಲ್ಲಿ ವಿವಿಧೆಡೆ ಟಕಗಳನ್ನು ನಿರ್ಮಸಲಾಗುವುದು ಎಂದು ತಿಳಿಸಿದರು. ಕರ್ನಾಟಕದಲ್ಲಿನ ಮನೆ ಮನೆ ಕಸ ಸಂಗ್ರಹ ದೇಶಕ್ಕೆ ವಾದರಿಯಾಗಿದೆ. ಗುಜರಾತ್‌ನಿಂದ ಬಂದ ತಂಡವೂ ಮೆಚ್ಚುಗೆ ಸೂಚಿಸಿದೆ. ಕಸ ವಿಲೇಗೆ ಇನ್ನೂ ಕೆಲವು ರಾಜ್ಯಗಳಲ್ಲಿ ಪ್ರಯತ್ನವೇ ಆರಂಭವಾಗಿಲ್ಲ ಎಂದು ಸಿಇಒ ಹೇಳಿದರು. ಶಾಸಕ ಕಿರಣ್‌ಕುವಾರ್ ಕೊಡ್ಗಿ ಮಾತನಾಡಿ, ಪ್ರತಿ ಪಂಚಾಯಿತಿಗಳಲ್ಲಿ ಎಸ್‌ಎಲ್‌ಆರ್‌ಎಂ ಟಕ ವಾಡಲು ಸ್ಥಳದ ಸಮಸ್ಯೆ ಇದ್ದರೆ ಒಂದಷ್ಟು ಪಂಚಾಯಿತಿ ಒಟ್ಟುಗೂಡಿ ಎಂಆರ್‌ಎಫ್ ಟಕ ವಾಡಿ ಒಪ್ಪಂದ ವಾಡಿಕೊಳ್ಳಬಹುದು ಎಂದರು. ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಕುಂದಾಪುರ ತಾ.ಪಂ. ಇಒ ಡಾ. ರವಿಕುವಾರ್ ಹುಕ್ಕೇರಿ, ಬ್ರಹ್ಮಾವರ ತಾ.ಪಂ. ಇಒ ಇಬ್ರಾಹಿಂಪುರ, ಹೆಬ್ರಿ ತಾ.ಪಂ. ಇಒ ವಿಜಯಾ ಉಪಸ್ಥಿತರಿದ್ದರು.

ರಾಜ್ಯ ಹಾಗೂ ಕೇಂದ್ರದ ಸಹಯೋಗದಲ್ಲಿ ಸ್ವಚ್ಛ ಭಾರತ ಕಲ್ಪನೆ ಸಾಕಾರವಾಗುತ್ತಿದೆ. ನತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ವಿಲೇಗೆ ಬೇಕಾದ ಎಲ್ಲ ವ್ಯವಸ್ಥೆಗಳೂ ಆಗಬೇಕು. ವಿಶ್ವಬ್ಯಾಂಕ್ ನೆರವಿನ ಮೂಲಕ 720 ಕೋ.ರೂ. ದೊರೆಯುವ ಪ್ಲಾಸ್ಟಿಕ್‌ಮುಕ್ತ ಕರಾವಳಿ ಯೋಜನೆಯಿಂದ ತ್ಯಾಜ್ಯ ವಿಲೇ ಇನ್ನಷ್ಟು ಆಧುನೀಕರಣವಾಗಲಿದೆ. 11 ನೂತನ ಎಂಆರ್‌ಎಫ್ ಟಕಗಳ ನಿರ್ವಾಣ ನಡೆಯಲಿದೆ. - ಕೋಟ ಶ್ರೀನಿವಾಸ ಪೂಜಾರಿ, ಸಂಸದ