ಕುಂದಾಪುರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಲವರನ್ನು ಅಭಿನಂದಿಸಲಾಯಿತು 
ಜಿಲ್ಲೆ

ಗುರು ಸ್ಮರಣೆಯಿಂದ ಸಾರ್ಥಕ್ಯ ಪ್ರಾಪ್ತಿ

ಇಂದಿರಾ ಎನ್ ಕೆ

ಕೋಟ: ಶಾಲಾ ಶಿಕ್ಷಣ ಬಳಿಕವೂ ಗುರುಗಳ ಸ್ಮರಿಸಿಕೊಂಡಾಗ ಗುರು ಸ್ಥಾನಕ್ಕೆ ಸಾರ್ಥಕ್ಯ ದೊರೆಯುತ್ತದೆ. ಗುರುಗಳ ಸ್ಥಾನ ಜವಾಬ್ದಾರಿಯುತ ಜತೆಗೆ ಪವಿತ್ರವಾಗಿದೆ ಎಂದು ನಿವೃತ್ತ ಪ್ರಾಂಶುಪಾಲೆ ತ್ರಿವೇಣಿ ಹೇಳಿದರು.

ವಿದ್ಯಾಗಿರಿ ತೆಕ್ಕಟ್ಟೆಯ ಕುಂದಾಪುರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಭಾನುವಾರ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಯಪ್ರಕಾಶ್, ಗುರುಪ್ರಸಾದ್, ಕೋದಂಡರಾಮ, ಪುರುಷೋತ್ತಮ, ಲೋಕೇಶ್, ರೇಣುಕಾ, ಕವಿತಾ, ವಿನುತಾ, ಜ್ಯೋತಿ, ಕೀರ್ತಿ, ಪದ್ಮಶೀಲಾ, ಪ್ರದೀಪ, ಪ್ರವೀಣ, ಮನೀಶ್, ಚಿತ್ರಾ ಸಹಿತ 16 ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು. ಜತೆಗೆ ರಾಜ್ಯಮಟ್ಟದ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪುರಸ್ಕೃತೆ ಮಂಜುಳಾ ಅವರನ್ನು ಸನ್ಮಾನಿಸಲಾಯಿತು.

ಗಾಯತ್ರಿ, ವೀಣಾ, ಅಶ್ವಿನಿ, ರಾಘವೇಂದ್ರ, ಮಿನಾಲ್, ಜ್ಯೋತಿ, ಪಂಚಮಿ ವೈದ್ಯ ಹಾಗೂ ರಾಹುಲ್ ಅಮೀನ್ ಉಪಸ್ಥಿತರಿದ್ದರು. ಸುಪ್ರಿತಾ ಪಾರ್ಥಿಸಿದರು. ಪ್ರಸನ್ನ ದೇವಾಡಿಗ ಸ್ವಾಗತಿಸಿದರು. ಮಂಜುಳಾ ಪ್ರಸ್ತಾವನೆಗೈದರು. ಭಾಗ್ಯಲಕ್ಷ್ಮೀ ವೈದ್ಯ ನಿರೂಪಿಸಿದರು.