ಜಿಲ್ಲೆ

ಪರಿಸರ ಮಾಹಿತಿ ಕಾರ್ಯಕ್ರಮ

ಎ. ಆರ್. ರಘುರಾಮ

ಮದ್ದೂರು : ಮನುಷ್ಯನ ಅತಿಯಾದ ದುರಾಸೆಗೆ ನಿಸರ್ಗ ನಾಶವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಗವಿಯಪ್ಪ ಹೇಳಿದರು.
ತಾಲೂಕಿನ ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿವಪುರ ಅರಣ್ಯ ವಲಯದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅರಣ್ಯ ಇಲಾಖೆ ಗುರುವಾರ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಗಿಡ ನಾಟಿಗೆ ಚಾಲನೆ ನೀಡಿ ಮಾತನಾಡಿದರು.
ಕಾಡು ನಾಶವಾಗುತ್ತಿರುವುದರಿಂದ ಗ್ರಾಮಗಳತ್ತ ಕಾಡು ಪ್ರಾಣಿಗಳು ಆಹಾರಕ್ಕಾಗಿ ನುಗ್ಗುತ್ತಿವೆ. ಇದು ಗ್ರಾಮೀಣ ಜನರಿಗೆ ಆತಂಕ ಉಂಟು ಮಾಡುತ್ತಿದೆ. ಆದ್ದರಿಂದ ಗಿಡಮರಗಳ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ಆಹಾರ ಸರಪಳಿಗೆ ಪೂರಕವಾಗಿ ನಾವು ಸ್ಪಂದಿಸಿ ಪರಿಸರ ಉಳಿಸಬೇಕಿದೆ ಎಂದರು.