ಜಿಲ್ಲೆ

ಕೆಸ್ತೂರು ಶಾಲಾ ಮಕ್ಕಳು ಜಿಲ್ಲಾಮಟ್ಟಕ್ಕೆ

ಎ. ಆರ್. ರಘುರಾಮ

ಮದ್ದೂರು: ಕೆಸ್ತೂರು ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆ ಮಕ್ಕಳು ತಾಲೂಕು ಮಟ್ಟದ ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಲ್.ಹಿತಶ್ರೀ 400 ಮೀ. ಓಟ (ಪ್ರ), ಎ.ಎಂ.ಲೇಖನಾ 400 ಮೀ. ಓಟ (ದ್ವಿ), ಡಿ.ಆರ್.ಲಾಲಿತ್ಯಾ 300 ಓಟ (ದ್ವಿ), ಎಂ.ಪಿ.ಹೇಮಂತ್ 200 ಮೀ. ಓಟ (ಪ್ರ), ಎ.ಆರ್.ಲಿಖಿತ್‌ಗೌಡ 200 ಮೀ. ಓಟ (ದ್ವಿ) ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.