??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಮಾನವ ಸರಪಳಿಗೆ ಸಂಘ-ಸಂಸ್ಥೆಗಳ ಬೆಂಬಲ

ಎ. ಆರ್. ರಘುರಾಮ

ನೂರಾರು ವಿದ್ಯಾರ್ಥಿಗಳು ಭಾಗಿ
ಮದ್ದೂರು : ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ವತಿಯಿಂದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ತಾಲೂಕಿನ ಗಡಿಭಾಗ ನಿಡಘಟ್ಟ ಗ್ರಾಮದಿಂದ ಆರಂಭಗೊಂಡ ಮಾನವ ಸರಪಳಿ ಗೆಜ್ಜಲಗೆರೆ ಗಡಿಭಾಗ ಮನ್‌ಮುಲ್ ವರೆವಿಗೂ ನಡೆದ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು, ಸಂಘಸಂಸ್ಥೆ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಪಾಲ್ಗೊಂಡು ಸರಕಾರದ ಯೋಜನೆಗೆ ಸ್ಪಂದಿಸಿದರು.
ನಿಡಘಟ್ಟ ಗ್ರಾಮದಲ್ಲಿ ಸಾಂಸ್ಕೃತಿಕ ಕಲಾ ತಂಡಗಳೊಟ್ಟಿಗೆ ಆರಂಭಗೊಂಡ ಮಾನವ ಸರಪಳಿ ಕಾರ್ಯಕ್ರಮದ ವೇಳೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಮಾತನಾಡಿದ ತಹಸೀಲ್ದಾರ್ ಡಾ. ಸ್ಮಿತಾರಾಮು, ತಾಲೂಕಿನಲ್ಲಿ 15 ಕಿ.ಮೀ. ವ್ಯಾಪ್ತಿಯ ರಸ್ತೆಯುದ್ದಕ್ಕೂ ಮಾನವ ಸರಪಳಿಯನ್ನು ರಚಿಸಿದ್ದು ವಿಶೇಷ. ಪ್ರಜಾಪ್ರಭುತ್ವವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ಗೊಂದಲಕ್ಕೆ ಕಾರಣ: ನಿಡಘಟ್ಟ ಗಡಿಗ್ರಾಮದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದ ವೇಳೆ ರಾಮನಗರ ಜಿಲ್ಲೆ ಗಡಿಭಾಗ ಹಾಗೂ ಮದ್ದೂರು ಗಡಿ ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳದ ಕಾರಣ ಸುಮಾರು 1 ಕಿ.ಮೀ. ನಷ್ಟು ಮಾನವ ಸರಪಳಿ ಜೋಡಣೆಯಾಗದೆ ಹಲವು ಗೊಂದಲಗಳಿಗೆ ಕಾರಣವಾಯಿತು. ನಿಡಘಟ್ಟ ಗ್ರಾಮದಿಂದ ಆರಂಭಗೊಂಡ ಮಾನವ ಸರಪಳಿ ಕೆಲ ಸ್ಥಳಗಳಲ್ಲಿ ನಿಯೋಜನೆಗೊಂಡಿದ್ದ ಸ್ಥಳಕ್ಕೆ ಕೆಲವರು ಸಕಾಲಕ್ಕೆ ಹಾಜರಾದ ಕಾರಣ ಮಾರ್ಗದುದ್ದಕ್ಕೂ ಮಾನವ ಸರಪಳಿ ಜೋಡಣೆಯಾಗದೆ ಹಲವು ಅವ್ಯವಸ್ಥೆಗಳಿಗೆ ಕಾರಣವಾಗಿ ವಿದ್ಯಾರ್ಥಿಗಳು ಬಳಲುವಂತಾಯಿತು.
ನೋಡಲ್ ಅಧಿಕಾರಿ ರಾಜಮೂರ್ತಿ, ತಾ.ಪಂ. ಇ.ಓ ರಾಮಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್, ವೃತ್ತ ನಿರೀಕ್ಷಕರಾದ ಶಿವಕುಮಾರ್, ವೆಂಕಟೇಗೌಡ, ಪಿಡಿಒ ಉಷಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.