filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0036,0.0000; brp_del_sen:0.1000,0.0000; motionR: null; delta:null; bokeh:0; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 108.0;aec_lux_index: 0;albedo: ;confidence: ;motionLevel: 65536;weatherinfo: weather?null, icon:null, weatherInfo:100;temperature: 40; 
ಜಿಲ್ಲೆ

ನಗರಕೆರೆ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ

ಎ. ಆರ್. ರಘುರಾಮ

ಮದ್ದೂರು : ತಾಲೂಕಿನ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಸ್.ಡಿ.ಮಹದೇವ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಗಿರೀಶ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಮಹದೇವ ಹೊರತು ಪಡಿಸಿ ಬೇರೆಯಾರೂ ನಾಮಪತ್ರ ಸಲ್ಲಿಸದ ಕಾರಣ ಚುಣಾವಣಾಧಿಕಾರಿಯಾಗಿದ್ದ ತಾಪಂ ಇಒ ರಾಮಲಿಂಗಯ್ಯ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು. ನಂತರ ಮಾತನಾಡಿದ ಮಹದೇವ, ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ನಗರಕೆರೆ ಪಂಚಾಯಿತಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಚರಂಡಿ, ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದರು. ಗ್ರಾಪಂ ಉಪಾಧ್ಯಕ್ಷೆ ಜಯರತ್ನ, ಸದಸ್ಯರಾದ ಆರ್.ಚಂದ್ರಕಲಾ, ಎನ್.ಡಿ.ಶಿವಚರಣ್, ಎ.ಟಿ.ಉಮಾ, ಗೌರಮ್ಮ, ಎನ್.ಆರ್.ಶಿಲ್ಪಾ, ಯು.ಆರ್.ಶ್ವೇತಾ, ಗೌರಮ್ಮ, ಮಹದೇವ, ಗಿರೀಶ್, ಅನಿತಾ, ಪಟೇಲ್‌ಹರೀಶ್ ಇತರರು ಇದ್ದರು.