ಜಿಲ್ಲೆ

ಬೈಕಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ

ಕಾಸರಗೋಡು: ಚೆರ್ಕಳ ಐದನೇ ಮೈಲಿಗಲ್ಲು ಸನಿಹ ವಿದ್ಯಾನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ 3.75 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ತುರ್ತಿ ನಿವಾಸಿ, ಪ್ರಸಕ್ತ ಮುಟ್ಟತ್ತೋಡಿ ತೈವಳಪ್ಪಿನಲ್ಲಿ ವಾಸಿಸುತ್ತಿರುವ ಅಬೂಬಕ್ಕರ್ ಸಿದ್ದೀಕ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಸಂಚಾರಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.