ಗದಗ:
ದೇವಾಂಗ ಸಮಾಜದ ಮುಖಂಡ ಎಂ.ಡಿ. ಲಕ್ಷ್ಮಿ ನಾರಾಯಣ ಅವರಿಗೆ ವಿಧಾನಪರಿಷತ್ ಗೆ ಅವಕಾಶ ನೀಡಬೇಕೆಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ದಶರಥರಾಜ ಕೊಳ್ಳಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲಕ್ಷ್ಮಿ ನಾರಾಯಣ ಅವರು ಬಿಜೆಪಿ ಕಾರ್ಯಕರ್ತರಾಗಿ, ಆರ್ ಎಸ್ ಎಸ್ ಮೂಲದವರಾಗಿ ಹಲವು ಕೆಲಸ ಮಾಡಿದ್ದಾರೆ. ಆರ್ ಎಸ್ ಎಸ್ ಮೂಲದಿಂದ ಸಂಘಟನೆಯಲ್ಲಿ ತೊಡಗಿಕೊಂಡು ಚಿಕ್ಕಂದಿನಿಂದಲೇ ಸಂಘಟನಾತ್ಮಕವಾಗಿ ಬೇಳೆದ ಎಂ ಡಿ ಲಕ್ಷ್ಮೀನಾರಾಯಣ್ ಅವರು ಈಗಾಗಲೇ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ನೇಕಾರಿಕೆ ಅವಲಂಬಿಸಿರುವ ಹಲವು ಸಮಾಜಗಳನ್ನು ಜೋಡಿಸಿ ನೇಕಾರ ಸಮುದಾಯಗಳ ಒಕ್ಕೂಟ ಸ್ಥಾಪಿಸಿ ಒಂದೇ ವೇದಿಕೆಯಲ್ಲಿ ನೇಕಾರರು ಜೋಡಿಸಿದ ಕೀರ್ತಿ ಅಕ್ಷಿ ಲಕ್ಷ್ಮೀನಾರಾಯಣ್ ಅವರಿಗೆ ಸಲ್ಲುತ್ತದೆ. ದೇವಾಂಗ ಹಾಗೂ ನೇಕಾರು ಕುಲಕಸುಬುಗಳನ್ನು ಮಾಡಿಕೊಂಡ ಸಮುದಾಯಗಳ ಒಗ್ಗಟ್ಟಿಗಾಗಿ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಲಕ್ಷ್ಮಿ ನಾರಾಯಣ ಅವರು ಶ್ರಮೀಸಿದ್ದಾರೆ. ಕೆ ಎಚ್ ಡಿ ಸಿ ನಿಗಮದ ಅಧ್ಯಕ್ಷರಾಗಿದ್ದಾಗ ನೇಕಾರರ ಪ್ರತಿಯೊಂದು ಸಮಸ್ಯೆಗಳಿಗೂ ಸ್ಪಂದಿಸಿ ಸಾಂಪ್ರದಾಯಿಕ ಉದ್ಯೋಗಕ್ಕೆ ಹಲವಾರು ಯೋಜನೆಯನ್ನು ತಂದು ನೇಕಾರರ ಜೀವನ ಮಟ್ಟ ಸುಧಾರಿಸುವ ಪ್ರಯತ್ನ ಮಾಡಿದ್ದಾರೆ. ಲಕ್ಷ್ಮೀನಾರಾಯಣ್ ಅವರಿಗೆ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಹಾಗೂ ಯಡಿಯೂರಪ್ಪನವರು ನೇಕಾರರ ಧ್ವನಿಯಾಗಿ ಕೆಲಸ ಮಾಡುವುದಕ್ಕಾಗಿ ಲಕ್ಷ್ಮಿ ನಾರಾಯಣ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ರಾಘವೇಂದ್ರ ಯಳವತ್ತಿ ಮಾತನಾಡಿ, ಬಡತನ ರೇಖೆಗಿಂತ ಕೆಳಲಮಟ್ಟದ ಆರ್ಥಿಕ ಪರಿಸ್ಥಿತಿ ಇರುವ ನೇಕಾರರ ಆರ್ಥಿಕ ಸ್ಥತಿ ಸುಧಾರಿಸುವ ಕೆಲಸವನ್ನು ಲಕ್ಷ್ಮಿ ನಾರಾಯಣ ಮಾಡಿದ್ದಾರೆ. ಎಲ್ಲ ಸಮುದಾಯದಗಳನ್ನು ಸಮಾನವಾಗಿ ಕಂಡು ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಅವರಿಗೆ ಮೇಲ್ಮನೆ ಸದಸ್ಯರಾಗುವ ಅವಕಾಶ ಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಣ್ಣದ, ಅಶೋಕ ಬಣ್ಣದ, ರಾಘವೇಂದ್ರ ಯಳವತ್ತಿ, ಅನಿಲ ಗಡ್ಡಿ, ಮಲ್ಲಿಕಾರ್ಜುನ ಬೆಲ್ಲದ, ಕೇಶವರಾಮ ಕೊಳ್ಳಿ, ರಾಜೇಂದ್ರ ಬರದ್ವಾಡ, ಪ್ರಕಾಶ ಹತ್ತಿಕಾಳ, ಪ್ರಭು ನೀಲಗುಂದ, ಅಶೋಕ ಹೊನ್ನಳಿ: ಸುಭಾಸ ಹುಲಗೂರ, ಸಂಕಪ್ಪ ಕಡ್ಡಿ, ಕೃಷ್ಣ ಬಿದರಳ್ಳಿ, ಮಹಾಬಳೇಶ್ವರಪ್ಪ ಬೇವಿನಮರದ, ನಾರಾಯಣ ಕಂಗೂರಿ, ಈಶ್ವರ ರೇವಣಕಿ, ಬಸವರಾಜ ಗಂಜಿ, ಪ್ರಕಾಶ ಗುಗ್ಗರಿ, ಸುಭಾಸ ಗಂಜಿ ಹಲವರು ಇದ್ದರು.