ಜಿಲ್ಲೆ

ಎಂಸಿಎ ವಿದ್ಯಾರ್ಥಿಗಳ ಸಾಧನೆ

ಪ್ರಶಾಂತ ಹೂಗಾರ

ಚಿಕ್ಕೋಡಿ: ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ಮೊದಲ ಬ್ಯಾಚ್ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸೌಭಾಗ್ಯ ಚಿಕ್ಕಮಠ 9.875 ಎಸ್‌ಜಿಪಿಎಯೊಂದಿಗೆ ಪ್ರಥಮ, ವಿದ್ಯಾಶ್ರೀ ಬೆಟುರಮಠ, ಪೂಜಾ ಭೋಗಿ, ಸುಪ್ರೀತಾ ವಾಳ್ವೇಕರ, ಸ್ವಾತಿ ಹಳ್ಳಿ, ಶ್ವೇತಾ ಸಂಕಪಾಳ, ಉಷಾ ರೇಣಕೆ, ಸುಪ್ರಿಯಾ ಕೊನುರೆ, ಸಹನಾ ಕೆ. 9.75 ಎಸ್‌ಜಿಪಿಎ ಯೊಂದಿಗೆ ದ್ವೀತಿಯ ಹಾಗೂ ಶ್ರೇಯಾ ನಸಬಿ, ಸಾನಿಯಾ ಪಾಟೀಲ, ಅಭಿಷೇಕ ರಾಜಂಗಾನೆ, ಸ್ವಾತಿ ಪಾಟೀಲ, ವಿದ್ಯಾ ಬಳಗಿ, ಸುರಜ ಚೌಗಲಾ, ಅನುಷಾ 9.625 ಎಸ್‌ಜಿಪಿಎಯೊಂದಿಗೆ ತೃತೀಯ ಸ್ಥಾನಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ತಿಳಿಸಿದ್ದಾರೆ.

ವಿಭಾಗ ಮುಖ್ಯಸ್ಥರಾದ ಸುನೀಲ ಶಿಂಧೆ, ಆನಂದ ಮಿರ್ಜೆ, ಐಶ್ವರ್ಯ ವಂಟಮುತ್ತೆ, ಜ್ಯೋತಿ ಕಾಗಲಕರ, ಶ್ರೇಯಾ ಕೆರಿಪಾಳೆ, ಸಂತೋಷ ಖೋತ ಇತರರಿದ್ದರು.