ಜಿಲ್ಲೆ

ಎಂಬಿಬಿಎಸ್​ ವಿದ್ಯಾರ್ಥಿ ಸಾವು

ಎಂ.ಎಸ್​.ಹಿರೇಮಠ ಬೆಳಗಾವಿ

ಕಾರವಾರ: ಗೋವಾ ಕಾಣಕೋಣ ಸಮೀಪ ಮಾಂಶೆಂನಲ್ಲಿ ಸಂಭವಿಸಿದ ಬೈಕ್​ ಅಪಘಾತದಲ್ಲಿ ಕಾರವಾರ ಸರ್ಕಾರಿ ಮೆಡಿಕಲ್​ ಕಾಲೇಜಿನ ಎಂಬಿಬಿಎಸ್​ ವಿದ್ಯಾರ್ಥಿ, ಬೆಳಗಾವಿ ಜಿಲ್ಲೆಯ ಗೋಕಾಕದ ಆದರ್ಶ ಪೂಜಾರಿ(23) ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಆದರ್ಶ ಅವರ ಸಹಪಾಠಿ ಬೆಳಗಾವಿ ಮೂಲದ ರೌನಕ್​ ಚೌಹಾಣ್​ (23) ಬೈಕ್​ ಚಲಾಯಿಸುತ್ತಿದ್ದರು. ಆತನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರವಾರ

ಕ್ರಿಮ್ಸ್​ಗೆ ಸೇರಿಸಲಾಗಿದೆ. ಇಬ್ಬರೂ ಬೈಕ್​ನಲ್ಲಿ ಗೋವಾಕ್ಕೆ ಊಟಕ್ಕೆ ತೆರಳಿದ್ದರು. ರಾತ್ರಿ ವಾಪಸ್​ ಬರುವಾಗ ಎಮ್ಮೆ ಅಡ್ಡ ಬಂದು ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದರೆ, ಹಿಂಬದಿ ಸವಾರ ಆದರ್ಶ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಾಣಕೋಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.