ಕಾರವಾರ: ಗೋವಾ ಕಾರಣಕೋಣ ಸಮೀಪ ಮಾಂಶೆಂನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಎಂಬಿಬಿಎಸ್ ವಿದ್ಯರ‍್ಥಿಯೊಬ್ಬ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದೆ.
ಕಾರವಾರ ರ‍್ಕಾರಿ ಮೆಡಿಕಲ್ ಕಾಲೇಜ್‌ನಲ್ಲಿ ಮೂರನೇ ರ‍್ಷದ ವೈದ್ಯಕೀಯ ವಿದ್ಯರ‍್ಥಿಯಾಗಿದ್ದ ಬೆಳಗಾವಿ ಜಿಲ್ಲೆಯ ಗೋಕಾಕದ ಆರ‍್ಶ ಪೂಜಾರಿ(23) ಮೃತರು. ಆರ‍್ಶ ಅವರ ಸಹಪಾಠಿಯಾಗಿದ್ದ ಬೆಳಗಾವಿ ಮೂಲದ ರೌನಕ್ ಚೌಹಾಣ್ (23) ಬೈಕ್ ಚಲಾಯಿಸುತ್ತಿದ್ದರು. ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರವಾರ ಕ್ರಿಮ್ಸ್ಗೆ ಸೇರಿಸಲಾಗಿದೆ.
ಇಬ್ಬರೂ ಬುಲೆಟ್ ಎನ್‌ಫೀಲ್ಡ್ ಬೈಕ್‌ನಲ್ಲಿ ಗೋವಾಕ್ಕೆ ಊಟಕ್ಕೆ ತೆರಳಿದ್ದರು. ರಾತ್ರಿ ವಾಪಸ್ ಬರುವಾಗ ಎಮ್ಮೆ ಅಡ್ಡ ಬಂದಿದ್ದು, ಬೈಕ್‌ನಿಂದ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದರೆ, ಹಿಂಬದಿ ಸವಾರ ಆರ‍್ಶ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕಾಣಕೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.