ಜಿಲ್ಲೆ

ಎಂಬಿಎ ಹೆಚ್ಚು ಆದ್ಯತೆಯ ಕೋರ್ಸ್

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವ್ಯಾಪಾರ-ಉದ್ಯಮ, ಮಾರುಕಟ್ಟೆ ಕ್ಷೇತ್ರಗಳಲ್ಲಿ ಎಂಬಿಎ ಹೆಚ್ಚು ಆದ್ಯತೆಯ ಕೋರ್ಸ್ ಆಗಿದೆ. ಶೇ. 50ರಷ್ಟು ಉದ್ಯಮದಲ್ಲಿ ಎಂಬಿಎ ಪದವೀಧರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೈಜನ್ ಎಜ್ಯುಪ್ಲಸ್ ಸೊಸೈಟಿಯ ಅಧ್ಯಕ್ಷ ಡಾ. ಎನ್.ಎ. ಚರಂತಿಮಠ ಹೇಳಿದರು.

ಹುಬ್ಬಳ್ಳಿಯ ಕೈಜನ್ ಎಜ್ಯುಪ್ಲಸ್ ಸೊಸೈಟಿಯ ಐಇಎಂಎಸ್ ಎಂಬಿಎ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ ಮತ್ತು ಪಿಜಿ ಡಿಪ್ಲೊಮಾ ತರಗತಿಗಳ ವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಉದ್ಯಮದಲ್ಲಿ ನಿರ್ಧಾರಗಳು ಡೇಟಾ ಚಾಲಿತ ನಿರ್ಧಾರಗಳಾಗಿವೆ. ಡೇಟಾದ ವಿಶ್ಲೇಷಣೆ ಮತ್ತು ಸ್ಕ್ರೀನಿಂಗ್ ಉದ್ಯಮದಲ್ಲಿ ದೊಡ್ಡ ಸವಾಲಾಗಿದೆ ಎಂದರು.

ಉದ್ಘಾಟಿಸಿದ ರಿಂಬಸ್ ಪ್ರೖೆವೇಟ್ ಲಿಮಿಟೆಡ್​ನ ನಿರ್ದೇಶಕ ರಿಯಾಜ್ ಬಸರಿ ಮಾತನಾಡಿ, ಉದ್ಯೋಗ ಮಾರುಕಟ್ಟೆಯಲ್ಲಿ ಅರ್ಹತೆ ಮತ್ತು ವ್ಯಕ್ತಿತ್ವಕ್ಕಿಂತ ಗ್ರಹಿಕೆ ಮತ್ತು ಮನೋಭಾವವು ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿಯ ಮನಸ್ಥಿತಿಯು ವೃತ್ತಿ ಜೀವನವನ್ನು ರೂಪಿಸುತ್ತದೆ. . ನೀವು ಪಡೆದ ಅವಕಾಶವು ಇತರರಿಗೆ ಸಿಗದಿರಬಹುದು. ಆದ್ದರಿಂದ ನಿಮಗೆ ಸಿಕ್ಕ ಅವಕಾಶಗಳಿಗೆ ಸಮಾಜಕ್ಕೆ ಮತ್ತು ಪೋಷಕರಿಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು

ಡಾ. ಪೂರ್ಣಿಮಾ ಚರಂತಿಮಠ ಮಾತನಾಡಿ, ಐಇಎಂಎಸ್ ಈ ವರ್ಷ ಆನ್​ಲೈನ್ ಪ್ರಮಾಣೀಕರಣ ಕೋರ್ಸ್​ಗಳಿಗಾಗಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್​ನೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕ ಡಾ.ವೀರಣ್ಣ ಡಿ.ಕೆ ಸ್ವಾಗತಿಸಿದರು. ಪೊ›. ಪ್ರೀತಿ ಬೆಳಗಾಂವಕರ ವಂದಿಸಿದರು. ಸವಿತಾ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು. ಶ್ರೀೕದೇವಿ ಹಿರೇಮಠ, ಪೊ›. ಪ್ರೀತಿ ಗೌಡರ ಇದ್ದರು.