ಜಿಲ್ಲೆ

ಮಯೂರೋತ್ಸವ 25ಕ್ಕೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಮಯೂರ ನೃತ್ಯ ಅಕಾಡೆಮಿ ವತಿಯಿಂದ ‘ಮಯೂರೋತ್ಸವ-2024’ ಕಾರ್ಯಕ್ರಮವನ್ನು ಡಿ. 25ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

500ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು. ಭರತನಾಟ್ಯದ ಅನೇಕ ನೃತ್ಯಗಳನ್ನು ಪ್ರಸ್ತುತಪಡಿಸುವುದರ ಜತೆಗೆ ‘ವಚನವಾಣಿ’ ಎಂಬ ನೃತ್ಯ ರೂಪಕ ಪ್ರದರ್ಶಿಸಲಾಗುವುದು.

ಕುಂದಗೋಳ ಕಲ್ಯಾಣಪೂರಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು. ಆಕ್ಸ್​ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ಮನ್ ವಸಂತ ಹೊರಟ್ಟಿ, ಪೊಲೀಸ್ ಆಯುಕ್ತ ಶಶಿಕುಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು. ತುಮಕೂರಿನ ಹಿರಿಯ ನೃತ್ಯ ಕಲಾವಿದ ಡಾ. ಸಾಗರ ಟಿ.ಎಸ್. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ವಿದುಷಿ ಹೇಮಾ ವಾಘಮೋಡೆ ತಿಳಿಸಿದ್ದಾರೆ.