ಜಿಲ್ಲೆ

ವಸತಿ ಕೇಂದ್ರಕ್ಕೆ ಮೇಯರ್ ಸುಧೀರ್ ಶೆಟ್ಟಿ ಭೇಟಿ

Mangaluru - Hariprasad Rai


ಮಂಗಳೂರು : ನಗರದ ಪಡುಕೋಡಿ, ಬಂಗ್ರ ಕೂಳೂರು ಮತ್ತು ಪಂಜಿಮೊಗರು ಮುಂತಾದ ನೆರೆ ಪೀಡಿತ ಪ್ರದೇಶದ ನಿವಾಸಿಗಳಿಗೆ
ಕೂಳೂರು ಚರ್ಚ್ ಶಾಲೆಯಲ್ಲಿ ವಸತಿ ಕೇಂದ್ರ ಸ್ಥಾಪಿಸಲಾಗಿದ್ದು , ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 43 ಮಕ್ಕಳು ಸಹಿತ ಒಟ್ಟು 197 ಮಂದಿ ವಸತಿ ಕೇಂದ್ರದಲ್ಲಿದ್ದು , ಮಂಗಳೂರು ಮಹಾ ನಗರ ಪಾಲಿಕೆ ವತಿಯಿಂದ ಉಟೋಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್, ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಹಾಗೂ ಪಾಲಿಕೆಯ ಅಧಿಕಾರಿಗಳು ಮೇಯರ್ ಜತೆಗಿದ್ದರು.