ಜಿಲ್ಲೆ

ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಮೇಯರ್ ಭೇಟಿ

Mangaluru - Hariprasad Rai



ಮಂಗಳೂರು : ಮಂಗಳೂರು ನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಅವರು ನಗರದ ಬಜಾಲ್ ಬಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಜಾಲ್ ಹಾಗೂ ಇತರ ಕಡೆಗಳಲ್ಲಿ ಕೊಳಚೆ ನೀರನ್ನು ನೇರವಾಗಿ ತೋಡಿಗೆ ಬಿಡಲಾಗುತ್ತೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಮೇಯರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ನಗರದ ಎಲ್ಲ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಲಾಗಿದೆ. ಬಜಾಲ್ ಬಳಿ ಇರುವ ಸಂಸ್ಕರಣಾ ಘಟಕದ ಸ್ವಲ್ಪ ದೂರದಲ್ಲಿ ಪೈಪ್‌ಗೆ ಹಾನಿಯಾದ ಸಂಭವ ಹೆಚ್ಚಿದ್ದು ಅದು 20 ಅಡಿ ಆಳದಲ್ಲಿರುವುದರಿಂದ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಮೇಯರ್ ತಿಳಿಸಿದರು.
ಬಜಾಲ್ ಸಂಸ್ಕರಣಾ ಘಟಕದ ಹಿಂಬದಿಯಿರುವ ಮನೆಗಳಿಗೆ ಮೇಯರ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಲ್ಯಾಬ್‌ಗೆ
ಭೇಟಿ ನೀಡಿ ಶುದ್ದೀಕರಣದ ಮೊದಲು ಹಾಗೂ ಶುದ್ದೀಕರಣದ ನಂತರದ ನೀರನ್ನು ಪರೀಶಿಲಿಸಿದರು. ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ , ವೀಣಾಮಂಗಳ ಹಾಗೂ ಶೋಭ ಪೂಜಾರಿ ಉಪಸ್ಥಿತರಿದ್ದರು.