filter: 135; fileterIntensity: 0.2; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಪಾಲಿಕೆಲಿ ಕನ್ನಡ ಅಂಕಿ ನಂಬರ್ ಪ್ಲೇಟ್ ಸದ್ದು!

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಪಾಲಿಕೆಯಲ್ಲಿ ಕನ್ನಡ ಕಡ್ಡಾಯಕ್ಕೆ ನಾಡದ್ರೋಹಿಗಳು ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಇದೀಗ ಕನ್ನಡ ಭಾಷೆ, ಅಂಕಿ ಸಂಖ್ಯೆ ಒಳಗೊಂಡಿರುವ ಮೇಯರ್ ವಾಹನ ನಂಬರ್ ಪ್ಲೇಟ್ ಬದಲಾವಣೆ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮನವೊಲಿಸುವ ಉದ್ದೇಶದಿಂದ ಪಾಲಿಕೆ ಮೇಯರ್ ಮಂಗೇಶ ಪವಾರ ಹೈ ಸೆಕ್ಯುರಿಟಿ ರಿಜಿಸ್ಟ್ರೆಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಹೆಸರಿನಲ್ಲಿ ಕನ್ನಡ ನಂಬರ್ ಪ್ಲೇಟ್ ಬದಲಾವಣೆಗೆ ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಪಾಲಿಕೆ ಆಯುಕರು, ಇತರರು ಒಪ್ಪದಿರುವ ಹಿನ್ನೆಲೆ ಬೇಸರಗೊಂಡ ಮೇಯರ್ ಸರ್ಕಾರಿ ವಾಹನ ಬಳಕೆ ಮಾಡುವುದನ್ನು ಕೈಬಿಟ್ಟಿದ್ದಾರೆ ಎಂದು ಪಾಲಿಕೆ ಆವರಣದಲ್ಲಿ ಚರ್ಚೆ ಆಗುತ್ತಿದೆ.

15 ದಿನಗಳಿಂದ ಬಳಕೆ ಇಲ್ಲ: ಕನ್ನಡ ಭಾಷೆ, ಅಂಕಿ ಸಂಖ್ಯೆ ಒಳಗೊಂಡಿರುವ ವಾಹನದಲ್ಲಿ ಸಂಚಾರ ನಡೆಸಿದರೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಮೇಯರ್ ಮಂಗೇಶ ಪವಾರಗೆ ಎಂಇಎಸ್ ಮುಖಂಡರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮೇಯರ್ ವಾಹನ ಬಳಕೆ ಮಾಡುತ್ತಿಲ್ಲ. ಅಲ್ಲದೆ, ಪಾಲಿಕೆ ಆಡಳಿತದಲ್ಲಿ ಮರಾಠಿ ಭಾಷೆಗೆ ಮೊದಲಾದ್ಯತೆ ನೀಡುವಂತೆ ಮೇಯರ್‌ಗೆ ಗಡುವು ವಿಧಿಸಿದ್ದಾರೆ. ಇದರೊಟ್ಟಿಗೆ ಸದಸ್ಯ ಸ್ಥಾನ ಅಸಿಂಧು ವಿಷಯ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಮಧ್ಯ ಸರ್ಕಾರಿ ಸೌಲಭ್ಯ ಬಳಕೆಗೆ ಮೇಯರ್‌ಗೆ ಅವಕಾಶ ಇಲ್ಲ. ಹೀಗಾಗಿ 15 ದಿನಗಳಿಂದ ವಾಹನ ಬಳಕೆ ಕೈಬಿಟ್ಟಿದ್ದಾರೆ.

ವಾಹನಕ್ಕೆ ತಡೆ ಒಡ್ಡಿಲ್ಲ: ಸರ್ಕಾರವು ಸ್ಟಿಕರ್ ನಂಬರ್ ಪ್ಲೇಟ್ ಬದಲಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಲು ಕಾಲಾವಕಾಶ ಕಲ್ಪಿಸಿದೆ. ಆದರೆ, ಬೆಳಗಾವಿ ಮೇಯರ್ ಬಳಕೆ ಮಾಡುತ್ತಿರುವ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲ ಎಂದು ನೋಟಿಸ್ ಕೊಟ್ಟಿಲ್ಲ. ಅವರು ಬಳಕೆ ಮಾಡುತ್ತಿರುವ ವಾಹನ ತಡೆಹಿಡಿದಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಅಂಕಿ ಸಂಖ್ಯೆಗಳು ಇರುವುದಿಲ್ಲ. ಆ ನಂಬರ್ ಪ್ಲೇಟ್ ಬಿಟ್ಟು ಬೇರೆ ಕಡೆ ಕನ್ನಡದಲ್ಲಿ ಅಂಕಿ ಸಂಖ್ಯೆಗಳನ್ನು ಬಳಕೆಗೆ ನಮ್ಮ ವಿರೋಧ ಇಲ್ಲ ಎಂದು ಬೆಳಗಾವಿ ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ವಿರೋಧಿ ನಡೆಗೆ ಆಕ್ರೋಶ

ಮಹಾನಗರ ಪಾಲಿಕೆಯಲ್ಲಿ ವ್ಯವಸ್ಥಿತವಾಗಿ ಕನ್ನಡ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಕನ್ನಡ ಭಾಷೆ, ಅಂಕಿ ಸಂಖ್ಯೆ ಒಳಗೊಂಡಿರುವ ನಾಮಫಲಕಗಳ ತೆರವುಗೊಳಿಸಲು ಎಂಇಎಸ್ ಮುಖಂಡರು ರಾಜಕೀಯ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮತ್ತೊಂದೆಡೆ ಆರ್‌ಟಿಒ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹೆಸರಿನಲ್ಲಿ ಕನ್ನಡ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಕನ್ನಡ ಪರ ಹೋರಾಟಗಾರರು ದೂರಿದ್ದಾರೆ.

ಮೇಯರ್ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಸರ್ಕಾರಿ ವಾಹನ ಬಳಸುತ್ತಿಲ್ಲ. ಆದರೆ, ಕನ್ನಡ ಭಾಷೆ, ಅಂಕಿ ಸಂಖ್ಯೆ ಒಳಗೊಂಡಿರುವ ನಾಮಫಲಕ ಹಾಕಿರುವುದಕ್ಕೆ ವಾಹನ ಬಳಸುತ್ತಿಲ್ಲ ಎಂಬ ಮಾಹಿತಿ ಗೊತ್ತಿಲ್ಲ. ಈ ಕುರಿತು ಅವರೊಂದಿಗೆ ಚರ್ಚಿಸುತ್ತೇನೆ. ಆದರೆ, ಕನ್ನಡ ನೆಲದಲ್ಲಿ ಕನ್ನಡ ಬಳಕೆ ಕಡ್ಡಾಯ. ಶುಭ.ಬಿ. ಪಾಲಿಕೆ ಆಯುಕ್ತೆ ಆರ್‌ಟಿಒ ನಿಯಮಗಳ ಪ್ರಕಾರ ಹಳೇ ವಾಹನಕ್ಕೆ ಸ್ಟಿಕರ್ ನಂಬರ್ ಪ್ಲೇಟ್ ಬದಲಿಗೆ ಇಂಗ್ಲಿಷ್‌ನಲ್ಲಿರುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಹೆಚ್ಚಾಗಿ ಸರ್ಕಾರಿ ವಾಹನ ಬಳಕೆ ಮಾಡುತ್ತಿಲ್ಲ. ಮಂಗೇಶ ಪವಾರ, ಪಾಲಿಕೆ ಮೇಯರ್