ಗೊಳಸಂಗಿ ಚ.ಚ. ಹೆಬ್ಬಾಳ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಐಕ್ಯೂಎಸಿ ಯೋಜನೆಯ ಪೂರ್ವ ಸಿದ್ಧತೆಗೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಮೃತ ಯಾದವ ಚಾಲನೆ ನೀಡಿದರು. ಪ್ರಾಚಾರ್ಯ ಪ್ರೊ. ಎಸ್.ಎಸ್. ರಾಜಮಾನ್ಯ, ಡಾ. ಸಂತೋಷ ಕಬಾಡೆ, ಸಂಚಾಲಕ ಶ್ರೀಶೈಲ ಬಬಲಾದ ಇದ್ದರು. 
ಜಿಲ್ಲೆ

ನಿಮ್ಮ ಪ್ರಬಂಧ ಇತರರಿಗೆ ಪ್ರೇರಕವಾಗಿರಲಿ

ಗೊಳಸಂಗಿ: ವಿಶ್ವ ವಿದ್ಯಾಲಯದ ಪಠ್ಯಕ್ರಮದಂತೆ ಯೋಜನಾ ಕಾರ್ಯದ ಪ್ರಬಂಧವನ್ನು ವಿದ್ಯಾರ್ಥಿಗಳು ಸಲ್ಲಿಸಬೇಕಿದ್ದು, ನಿಗದಿತ ವಿಷಯ, ಅಧ್ಯಯನ, ಸಮರ್ಪಕ ಯೋಜನೆಯೊಂದಿಗೆ ಬರೆಯುವ ಪ್ರಬಂಧ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಲಿ ಎಂದು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಮೃತ ಯಾದವ ಹೇಳಿದರು.

ಸ್ಥಳೀಯ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ) ವಿಭಾಗದಡಿ ಯೋಜನೆ ಪೂರ್ವಸಿದ್ಧತೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಚಾಲಕ ಡಾ. ಸಂತೋಷ ಕಬಾಡೆ ಮಾತನಾಡಿ, ಪದವಿ ಅಂತಿಮ ವರ್ಷದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಯೋಜನಾ ಕಾರ್ಯ ಕೈಗೊಳ್ಳಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಸ್.ಎಸ್. ರಾಜಮಾನ್ಯ, ಐಕ್ಯೂಎಸಿ ಸಂಚಾಲಕ ಶ್ರೀಶೈಲ ಬಬಲಾದ ಮಾತನಾಡಿದರು.

ಪ್ರೊ. ಸುಭಾಸ ಡಿ., ಪ್ರೊ. ಎಸ್.ಆರ್. ಕುಂಬಾರ, ಪ್ರೊ. ಉಮೇಶ ಹೂಗಾರ, ಪ್ರೊ. ಮಾಸ್ಟ್ ಅಮ್ಮಾಪರ ಕೂಡ್ಲಿಗಪ್ಪ, ಯಶೋದಾ ಉಪ್ಪಾರ, ನಾಗರತ್ನಾ ಹುಬ್ಬಳ್ಳಿ ಇದ್ದರು.