ಜಿಲ್ಲೆ

ದೇಶ ಸೇವೆಗೆ ಸದಾ ಬದ್ಧರಾಗಿರಲಿ

ವಿದ್ಯಾ ಶೆಟ್ಟನಗೌಡ್ರ

ಚಿಕ್ಕೋಡಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ಗಳಂತಹ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು, ನಾಯಕತ್ವ, ರಕ್ಷಣೆ, ಸೇವಾಭಾವ, ಸಹಬಾಳ್ವೆ, ಸಮಯ ಪಾಲನೆ, ನಿಸರ್ಗ ಪ್ರೇಮಗಳಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ಯಕ್ಸಂಬಾದಲ್ಲಿರುವ ಶಿವಶಂಕರ ಜೊಲ್ಲೆ ಸಿಬಿಎಸ್‌ಇ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜೊಲ್ಲೆ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಬ್-ಬುಲ್ ಬುಲ್ ಮತ್ತು ಸ್ಕೌಟ್ಸ್-ಗೈಡ್ಸ್ಗಳ ಒಂದು ದಿನದ ಸ್ಕೌಟಿಂಗ್ ಪರಿಚಯಾತ್ಮಕ ಶಿಬಿರದಲ್ಲಿ ಮಾತನಾಡಿದರು.

ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವಿಠ್ಠಲ ಎಸ್.ಬಿ. ಮಾತನಾಡಿದರು.

ಶಿಬಿರದಲ್ಲಿ ಎನ್.ಜಿ.ಪಾಟೀಲ, ಸಂಜಯ ಸದಲಗೆ, ಮಹೇಶ ಪೂಜಾರ, ಆಶಾ ಹುಲಿಕವಿ, ಸಿರಿಯಾ ಹುಲಿಕವಿ, ಮಹಾದೇವಿ ಜಿನಗೌಡರ, ಮುಖ್ಯ ಶಿಕ್ಷಕ ವಿರೂಪಾಕ್ಷಿ ಭಿವಸೆ, ಸೀಮಾ ಪಾಟೀಲ, ವಿದ್ಯಾರ್ಥಿಗಳು ಹಾಗೂ ಇತರರಿದ್ದರು. ವಿಜಯ ನಾಯಕ ಸ್ವಾಗತಿಸಿದರು. ಹೂವಾನಂದ ಮಾಳಗೆ ನಿರೂಪಿಸಿದರು.

ವಿದ್ಯಾರ್ಥಿಗಳು ಬೌದ್ಧಿಕ, ಶಾರೀರಿಕ, ಮಾನಸಿಕ, ಭಾವನಾತ್ಮಕವಾಗಿ ಸದೃಢರಾಗಿ ಜೀವನ ಕೌಶಲ ಅಳವಡಿಸಿಕೊಳ್ಳಬೇಕು ದೇಶಾಭಿಮಾನ, ಸಂಸ್ಕೃತಿ ಸದಾಚಾರ ಮೆರೆಯಬೇಕು. ರಾಷ್ಟç ಸೇವೆಗೆ ಸದಾ ಬದ್ಧರಾಗಿರಬೇಕು. | ಶಶಿಕಲಾ ಜೊಲ್ಲೆ ಶಾಸಕಿ