ನರಗುಂದ: ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸಬೇಕು ಎಂದು ಆಗ್ರಹಿಸಿ ಯೋಜನಾ ಸಂತ್ರಸ್ತರು ನಡೆಸಿರುವ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ವಕೀಲರ ಸಂಘದ ಸದಸ್ಯರು ನರಗುಂದ ಉಪತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು. ಈ ಭಾಗದ ರೈತರು ಆರು ದಶಕದಿಂದ ಮನವಿ ಮಾಡುತ್ತಿದ್ದಾರೆ. ಇದನ್ನು ಸರ್ಕಾರ ಗಮನಿಸಿದ್ದರೂ ತ್ವರಿತ ಕಾಮಗಾರಿಗೆ ಸೂಚನೆ ನೀಡಿಲ್ಲ. ಈ ಭಾಗದ ನಾಲ್ಕು ಜಿಲ್ಲೆಗಳ 13 ತಾಲೂಕುಗಳಿಗೆ ನೆರವಾಗುವ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯನ್ನು ಸರ್ಕಾರಗಳು ಶೀಘ್ರ ಅನುಷ್ಠಾನಗೊಳಿಸಬೇಕು. ಸರ್ಕಾರಗಳು ನಿರ್ಲಕ್ಷ್ಯ ಮುಂದುವರಿಸಿದರೆ ಉಗ್ರ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಪಿ.ಎಸ್. ಹುಂಬಿ, ಸಂಘದ ಅಧ್ಯಕ್ಷ ವಿ.ಎಸ್. ದೇಶಪಾಂಡೆ, ಬಿ.ಎನ್. ಭೋಸಲೆ, ಸಿ.ಎಸ್. ಪಾಟೀಲ, ಎಸ್.ಆರ್. ಪಾಟೀಲ, ವಿ.ಸಿ. ಪಾಟೀಲ, ಎಂ.ಟಿ. ಪಾಟೀಲ, ಜೆ.ಸಿ. ಬೋಗಾರ, ಆರ್.ಆರ್. ನಾಯ್ಕರ್, ಎ.ವಿ. ಭೋಸಲೆ, ಡಿ.ಬಿ. ಯಲಿಗಾರ, ಎಫ್.ವೈ. ದೊಡಮನಿ, ಎಸ್.ಬಿ. ಮುದ್ದನಗೌಡ್ರ, ಕೆ.ಎಸ್. ಹೂಲಿ, ಎಚ್.ಪಿ. ಮುದ್ದನಗೌಡ್ರ, ಆರ್.ಸಿ. ಪಾಟೀಲ, ಇತರರಿದ್ದರು.