ಜಿಲ್ಲೆ

ಡೆಂಘೆ-ಮಲೇರಿಯಾ ರೋಗಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

ಇಂದಿರಾ ಎನ್ ಕೆ

ಕುಂದಾಪುರ: ನಿಂತ ನೀರಿನಲ್ಲಿ ಡೆಂಘೆ, ಮಲೇರಿಯಾ ರೋಗಗಳನ್ನು ಹರಡುವ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ನಮ್ಮ ಮನೆ, ಶಾಲೆ ಹೀಗೆ ನಾವು ವಾಸಿಸುವ ಪರಿಸರ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಧುಕುವಾರ್ ಹೇಳಿದರು.

ಹೊಸೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ, ಡೆಂಘೆ-ಮಲೇರಿಯಾ ರೋಗಗಳ ಬಗ್ಗೆ ವಾಹಿತಿ ನೀಡಿ ವಾತನಾಡಿದರು.

ಪ್ರಭಾರ ಮುಖ್ಯಶಿಕ್ಷಕಿ ಕಾಂತಿ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಂರಕ್ಷಣಾಧಿಕಾರಿ ನಾಗರತ್ನಾ, ಹೊಸೂರು ಆರೋಗ್ಯ ಉಪ ಕೇಂದ್ರದ ಸಿಎಚ್‌ಒ ದೀಪಾಕುವಾರಿ, ಆಶಾ ಕಾರ್ಯಕರ್ತೆ ಕಲ್ಪನಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಹೆರಿಯಣ್ಣ ಶೆಟ್ಟಿ ವಂದಿಸಿದರು. ಸಹಶಿಕ್ಷಕರಾದ ಉದಯ ನಾಯ್ಕ ನಿರೂಪಿಸಿದರು.