ಕಾಶ್ಮೀರದ ಪಹಲ್ಗಾಮ್ ಕೃತ್ಯ ಖಂಡಿಸಿ ತಾಲೂಕು ಮುಸ್ಲಿಂ ಕಮಿಟಿ ಹಾಗೂ ಅಹಲೆ ಸುನ್ನತೆ ಜಾಮಿಯಾ ಮಸ್ಜೀದ್ ಕಮಿಟಿಯಿಂದ ಯಲಬುರ್ಗಾ ಗ್ರೇಡ್-2 ತಹಸೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಬಾಬುಸಾಬ ಕುಂದಗೊಳ, ಅಖ್ತರ್ ಸಾಬ ಖಾಜಿ, ಮಹೆಬೂಬಸಾಬ, ಎಂ.ಎ್. ನದಾಫ್, ರಹೆಮಾನ್‌ಸಾಬ್ ನಾಯಕ, ಬಾಬುಸಾಬ ಮಂಡಲಗಿರಿ ಇತರರಿದ್ದರು. 
ಜಿಲ್ಲೆ

ಶಾಂತಿ ಕದಡಿದ ಉಗ್ರರಿಗೆ ತಕ್ಕ ಶಿಕ್ಷೆಯಾಗಲಿ

ಯಲಬುರ್ಗಾ: ಕಾಶ್ಮೀರದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಉಗ್ರರನ್ನು ಸಂಪೂರ್ಣ ಮಟ್ಟಹಾಕಬೇಕು ಎಂದು ಮುಸ್ಲಿಂ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ವಕೀಲ ಎಚ್.ಎಚ್. ಹಿರೇಮನಿ ಆಗ್ರಹಿಸಿದರು.

ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಭಯೋತ್ಪಾದಕರು ಕೊಂದ ಕೃತ್ಯವನ್ನು ಖಂಡಿಸಿ ತಾಲೂಕು ಮುಸ್ಲಿಂ ಕಮಿಟಿ ಹಾಗೂ ಅಹಲೆ ಸುನ್ನತೆ ಜಾಮಿಯಾ ಮಸ್ಜೀದ್ ಕಮಿಟಿಯಿಂದ ಗ್ರೇಡ್-2 ತಹಸೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆಗೆ ಮನವಿ ಸಲ್ಲಿಸಿ ಸೋಮವಾರ ಮಾತನಾಡಿದರು.

ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿಗಳ ಕೃತ್ಯ ಖಂಡನೀಯ. ಈ ವಿಚಾರದಲ್ಲಿ ಕೆಲ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಕೆಲ ರಾಜಕಾರಣಿಗಳು ಜಾತಿ, ಧರ್ಮದ ಹೆಸರಲ್ಲಿ ಹಿಂದು-ಮುಸ್ಲಿಮರ ಸಾಮರಸ್ಯ ಹಾಳು ಮಾಡುವ ಪ್ರಯತ್ನ ಮಾಡುತ್ತಿವೆ.

ಭಯೋತ್ವಾದಕರಿಗೆ ಯಾವುದೇ ಜಾತಿ, ಮತ, ಪಂಥದ ಭೇದ ಇರುವುದಿಲ್ಲ. ಇಂತವರಿಗೆ ಉಗ್ರವಾದ ಶಿಕ್ಷೆ ನೀಡಬೇಕು. ವಿಶ್ವದಲ್ಲಿ ಭಾರತ ಸರ್ವಧರ್ಮಗಳ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಶಾಂತಿಯನ್ನು ಕದಡುವ ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದರು.

ಮುಖಂಡರಾದ ಪಾಷಾಸಾಬ್ ಕನಕಗಿರಿ, ಮಹೆಮೂದ್ ಮಿಯಾ ಖಾಜಿ, ತಾಜುದ್ದೀನ್‌ಸಾಬ್ ಮಕಾನದಾರ, ರಶೀದ್ ಖಾಜಿ, ಮೈನು ಎಲಿಗಾರ, ಮೊಹಮ್ಮದ ಅಲಿ ಸಂಕನೂ, ಶಾಬುದ್ದೀನ್ ಎಲಿಗಾರ, ಎಂ.ಡಿ. ರಫಿ ಕೊಪ್ಪಳ, ಪಾಷಾ ಗುಳೇದಗುಡ್ಡ, ಅಬ್ಬಾಸ್ ಕೊತ್ವಾಲ್, ಮೈನುಸಾಬ ವಣಗೇರಿ, ಅಜಮೀರ್ ಹೀರೆಮನಿ, ಹುಸೆನ್ ನಿಲಗಾರ, ರಾಜಸಾಬ್ ನಾಲಬಂದ ಇತರರಿದ್ದರು.