filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.38064778, 0.25166667);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಪೌರಕಾರ್ಮಿಕರ ಸೇವೆ ಕಾಯಂ ಆಗಲಿ

ಸವದತ್ತಿ: ರಾಜ್ಯಾದ್ಯಂತ ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅರ್ನಿದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಪೌರ ಕಾರ್ಮಿಕರ ಮುಷ್ಕರಕ್ಕೆ ತಾಲೂಕಿನ ದಲಿತ ಜಂಟಿ ಕ್ರಿಯಾ ಹೋರಾಟ ಸಮಿತಿ ಹಾಗೂ ರಾಜ್ಯ ದಲಿತ ಸಂರ್ಷ ಸಮಿತಿ ಬೆಂಬಲ ಸೂಚಿಸಿ ಪುರಸಭೆ ಆರೋಗ್ಯಾಧಿಕಾರಿ ಚಂದ್ರಶೇಖರ ಮಲಕನ್ನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಮುಖಂಡ ಬಸವರಾಜ ತಳವಾರ ಮಾತನಾಡಿ, ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಗಾಗಿ ಹಗಲಿರಲು ಶ್ರಮಿಸುತ್ತಿದ್ದಾರೆ. ಅವರು ಕೆಲಸ ಮಾಡದಿದ್ದರೆ ಇಡೀ ಊರು ಮಲಿನವಾಗುತ್ತದೆ. ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ಸರ್ಕಾರ ತಣವೇ ಸ್ಪಂದಿಸಿ ಬೇಡಿಕೆ ಈಡೇರಿಸಬೇಕು ಎಂದರು. ಪೌರ ನೌಕರರ ಸ್ಥಳಿಯ ಅಧ್ಯ ದೂರಪ್ಪ ಗುರುನವರ ಮಾತನಾಡಿ, ಸರ್ಕಾರ ಎಲ್ಲ ನಗರ ಸ್ಥಳಿಯ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯ ನೀಡಬೇಕು. ಹೊರಗುತ್ತಿಗೆಯ ವಾಹನ ಚಾಲಕರು, ನೀರು ಸರಬರಾಜು ಲೋಡರ್ಸ್​, ಕ್ಲೀನರ್ಸ್​, ಸ್ಯಾನಿಟರಿ ಸೂಪರ್​ವೈಸರ್​, ಯುಜಿಡಿ ಸಹಾಯಕರು ಹಂತಹಂತವಾಗಿ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಎಲ್ಲ ನೌಕರಿಗೆ ಎಸ್​ಎ್​ಸಿ ಮುಖ್ಯ ನಿಧಿಯಿಂದ ವೇತನ ನೀಡಬೇಕೆಂದು ಆಗ್ರಹಿಸಿದರು.

ಮುಖಂಡರಾದ ರವಿ ದೊಡಮನಿ, ಕೆ.ಎಸ್​. ಮಲ್ಲೂರ, ನಾಗಪ್ಪ ಬಡೆಪ್ಪನವರ, ಗದಿಗೆಪ್ಪ ದೊಡಮನಿ, ಶಿವಾನಂದ ಮಾದರ, ಪೌರ ನೌಕರರ ಉಪಾಧ್ಯ ರಾವೇಂದ್ರ ಕೊರವರ, ಯಲ್ಲಪ್ಪ ಬೇವಿನಗಿಡದ, ಮಾರುತಿ ಶಿಂಗೆ, ಲಕ್ಷ$್ಮಣ ಮಾದರ, ಸಂತೋಷ ಕಾಳೆ, ರವಿ ಮಾದರ, ಪರಶುರಾಮ ಹಿರೇಕೆಂಚಮ್ಮನವರ, ಹನುಮಂತ ಮೂಡಲಗಿ, ಶಿವಾನಂದ ಜಂಬುದೀಪ ಇತರರು ಇದ್ದರು.