ಹಾರೂಗೇರಿ: ವೃತ್ತಿಯನ್ನು ಕಿಳಾಗಿ ನೋಡಬಾರದು. ಮಾಡುವ ವೃತ್ತಿಯಲ್ಲಿ ತೃಪ್ತಿ ಕಾಣಬೇಕು. ವೃತ್ತಿಯ ಪಾವಿತ್ರ್ಯ ಕಾಪಾಡಿಕೊಳ್ಳಬೇಕು ಎಂದು ಸಿಪಿಐ ರವಿಚಂದ್ರ ಡಿ.ಬಿ. ಹೇಳಿದರು.
ಪಟ್ಟಣದ ರೂಪಾ ಫೋಟೋ ಸ್ಟುಡಿಯೋ ಆವರಣದಲ್ಲಿ ಚನ್ನವೃಷಭೇಂದ್ರ ಛಾಯಾಗ್ರಾಹಕರ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಶಿವಯ್ಯ ಮಠಪತಿ, ಅಧ್ಯಕ್ಷ ಹನುಮಂತ ಕುರಿ, ಉಪಾಧ್ಯಕ್ಷ ಹನುಮಂತ ಸಣ್ಣಕ್ಕಿನವರ, ಕಾರ್ಯದರ್ಶಿ ರವಿ ದೊಂಗಡಿ, ಖಜಾಂಚಿ ಜ್ಯೋತಿಬಾ ದುಮಾಳೆ, ರಾಜು ದೊಂಗಡಿ, ತಮ್ಮಾಣಿ ಕುರಿ, ಸಹದೇವ ಲಾಳಿ ಇತರರು ಇದ್ದರು. ಸಿದ್ದು ಸವದಿ ನಿರೂಪಿಸಿದರು.