ಉಳ್ಳಾಗಡ್ಡಿ-ಖಾನಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಉದ್ದೇಶದಿಂದ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸಮೀಪದ ಯಮಕನಮರಡಿ ಕ್ಷೇತ್ರದ ಗೋಟೂರ, ಹೆಬ್ಬಾಳ, ಹಂಚಿನಾಳ, ಕರಗುಪ್ಪಿ ಗ್ರಾಮಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದರು. ಗ್ರಾಮಗಳಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲು ಎಲ್ಲರೂ ಬಿಜೆಪಿ ಬೆಂಬಲಿಸಬೇಕು ಎಂದರು.
ಹತ್ತರಗಿಯ ಹರಿ ಮಂದಿರದ ಡಾ.ಆನಂದ ಮಹಾರಾಜ ಗೋಸಾವಿ, ಕಾರಿಮಠ ಹತ್ತರಗಿಯ ಶ್ರೀಗುರುಸಿದ್ಧೇಶ್ವರ ಸ್ವಾಮೀಜಿ, ಜಾರಕಿಹೊಳಿ ಕೃಪಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು ಅವರಿಂದ ಸತ್ಕಾರ ಸ್ವೀಕರಿಸಿದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಯಮಕನಮರಡಿ ಉತ್ತರ ಮಂಡಳದ ಬಿಜೆಪಿ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಳದ ಅಧ್ಯಕ್ಷ ಅಪ್ಪಯ್ಯ ಜಾಜರಿ, ಬಿಜೆಪಿ ಮುಖಂಡರಾದ ರವಿಂದ್ರ ಹಂಜಿ, ಹನುಮಂತ ಇನಾಮದಾರ, ಮಹಾವೀರ ನಾಶಿಪುಡಿ, ಚಂದ್ರಕಾಂತ ಕಾಪಸಿ, ಚೇತನಗೌಡ ಪಾಟೀಲ, ಬಸವರಾಜ ಉದೋಶಿ, ಬಾಳಯ್ಯ ತವಗಮಠ, ಕೆಂಪಣ್ಣ ಕೋಚೆರಿ, ವಿನಯ ಪಾಟೀಲ, ಆನಂದ ಕಂಕಣವಾಡಿ ಇತರರು ಇದ್ದರು.