ಜಿಲ್ಲೆ

ಒಳ್ಳೆಯದಕ್ಕೆ ಬಳಕೆಯಾಗಲಿ ನಾರಿ ಶಕ್ತಿ

ಸಿದ್ದಾಪುರ: ಇಂದು ಬಹಳಷ್ಟು ಕಡೆ ಮಹಿಳೆಯರಿಂದ ಪುರುಷರು ಶೋಷಣೆಗೆ ಒಳಗಾಗುತ್ತಿರುವ ಉದಾಹರಣೆಗಳಿವೆ. ಮಹಿಳೆಯರಲ್ಲಿರುವ ಮಮತೆ, ಸಹನೆ, ಕರುಣೆಯಂತಹ ಶಕ್ತಿಯನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು, ಒಳ್ಳೆಯ ಪ್ರಜೆಗಳನ್ನಾಗಿ ಮಾಡಿದರೆ ಅದು ಕೂಡ ಮಹಿಳೆಯ ಸಾಧನೆಯೇ ಆಗುತ್ತದೆ ಎಂದು ಧನ್ವಂತರಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೂಪ ಭಟ್ಟ ಹೇಳಿದರು.

ಪಟ್ಟಣದ ನೌಕರರ ಭವನದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲೂಕು ಘಟಕದ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲೂಕು ಘಟಕದ ಗೌರವಾಧ್ಯಕ್ಷ ಎಂ. ಕೆ. ನಾಯ್ಕ ಹೊಸಳ್ಳಿ ಮಾತನಾಡಿ, ಎಲ್ಲರನ್ನೂ ಸಮಾನವಾದ ತಕ್ಕಡಿಯಲ್ಲಿ ನೋಡಿದರೆ ಬದುಕು ಸಾರ್ಥಕವಾಗುತ್ತದೆ. ಶಿಕ್ಷಣದಿಂದ ಮಾತ್ರ ದೌರ್ಜನ್ಯ ತಡೆಗಟ್ಟಬಹುದು ಎಂದರು.

ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಸಾಧಕಿ ಕುಸುಮಾ ಈಶ್ವರ ನಾಯ್ಕ ಮುಗದೂರ ಅವರನ್ನು ಸನ್ಮಾನಿಸಲಾಯಿತು. ವೈವಿಧ್ಯಮಯ ಕ್ಷೇತ್ರದಲ್ಲಿ ಮಹಿಳೆ ಕುರಿತು ಆಯೋಜಿಸ್ದ ಚಿತ್ರಕಲಾ ಸ್ಪರ್ಧೆವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗುಲಾಬಿ ನಾಯ್ಕ ಪ್ರಾರ್ಥಿಸಿದರು. ಕೆ. ಪಿ. ಮಮತ ಸ್ವಾಗತಿಸಿದರು. ಸುಮತಿ ನಾಯ್ಕ ವಂದಿಸಿದರು. ಪ್ರಥ್ವಿ ಎಚ್ .ಎಸ್. ಕಾರ್ಯಕ್ರಮ ನಿರ್ವಹಿಸಿದರು.