ಜಿಲ್ಲೆ

ಹಿಂದು ಸಮಾಜ ಬಲಿಷ್ಠವಾಗಲಿ

ತುಮಕೂರು ಡೆಸ್ಕ್

ಹುಳಿಯಾರು: ಆರ್​ಎಸ್​ಎಸ್​ ನೂರು ವರ್ಷದ ಪಯಣ ದೇಶದ ಸಾಮಾಜಿಕ, ಸಾಂಸತಿಕ ಮತ್ತು ರಾಜಕೀಯ ಚಿತ್ರಣವನ್ನೇ ಬದಲಾಯಿಸುವಂತಾಗಿದೆ. ವ್ಯಕ್ತಿ ನಿರ್ಮಾಣವೇ ಸಂದ ಮೂಲ ಗುರಿ ಎಂದು ದಣ ಪ್ರಾಂತ ಬಾಲಗೋಕುಲ ಸಂಯೋಜಕ ಉಮೇಶ್​ ತಿಳಿಸಿದರು.

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂದ (ಆರ್​ಎಸ್​ಎಸ್​) ಶತಮಾನೋತ್ಸವದ ಸಂಭ್ರಮ, ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಪರಮಹಂಸ, ದಯಾನಂದ ಸರಸ್ವತಿ, ಬಸವಣ್ಣ, ಶಂಕರಾಚಾರ್ಯ, ಮಧ್ವಾಚಾರ್ಯ ಮುಂತಾದ ಮಹಾಪುರುಷರು ಧರ್ಮವನ್ನು ಉಳಿಸಲು ಮಾಡಿದ ಕಾರ್ಯಗಳಿಗೆ ಹೆಡಗೇವಾರ್​ಜಿ ಸಂಟನೆಯ ರೂಪ ನೀಡಿ 1925ರ ವಿಜಯದಶಮಿಯ ದಿನ ಆರ್​ಎಸ್​ಎಸ್​ ಸ್ಥಾಪಿಸಿದರು. ಹಿಂದು ಸಮಾಜವನ್ನು ಬಲಿಷ್ಠವಾಗಿಸಿ, ಸಂಟನೆಯ ಶಕ್ತಿಯಿಂದ ಸಮಾಜರಕ್ಷಣೆಯ ಕಾರ್ಯ ಮುಂದುವರಿಸುವುದು ಅವರ ಉದ್ದೇಶವಾಗಿತ್ತು ಎಂದರು.

ಸ್ವಾತಂತ್ರ$್ಯ ಹೋರಾಟ, ಭಾರತ&ಪಾಕಿಸ್ತಾನ ವಿಭಜನೆಯ ದುರಂತ, ತುರ್ತು ಪರಿಸ್ಥಿತಿ ಈ ಎಲ್ಲ ಸಂದರ್ಭಗಳಲ್ಲಿ ಸಾವಿರಾರು ಸ್ವಯಂಸೇವಕರು ಪ್ರಾಣತ್ಯಾಗ ಮಾಡಿದರು. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ$್ಯವು ಅವರ ತ್ಯಾಗದ ಫಲ ಎಂದು ಹೇಳಿದರು.

ಆರ್​ಎಸ್​ಎಸ್​ ಶಾಖೆ ಎಂದರೆ ಕೇವಲ ವ್ಯಾಯಾಮ ಅಥವಾ ಆಟಗಳ ಕೇಂದ್ರವಲ್ಲ. ಶ್ಲೋಕ, ದೇಶಭಕ್ತಿ ಗೀತೆಗಳು, ಮಹಾಪುರುಷರ ಕಥೆಗಳ ಮೂಲಕ ವ್ಯಕ್ತಿ ನಿರ್ಮಾಣ ಮಾಡುವ ಸ್ಥಳ ಅದು. ಈ ವ್ಯಕ್ತಿ ನಿರ್ಮಾಣವೇ ಇಂದು ದೇಶಕ್ಕೆ ಒಬ್ಬ ಉತ್ತಮ ಪ್ರಧಾನಿ, ಅನೇಕ ಮುಖ್ಯಮಂತ್ರಿಗಳನ್ನು ನೀಡಲು ಕಾರಣವಾಗಿದೆ ಎಂದು ತಿಳಿಸಿದರು.

ಶತಮಾನೋತ್ಸವದ ಸಂಧರ್ಭದಲ್ಲಿ ಸಂವು ""ಪಂಚ ಪರಿವರ್ತನೆ' ಎಂಬ ಹೊಸ ಸಂಕಲ್ಪ ೂಷಿಸಿದ್ದು, ಇದರ ಪ್ರಮುಖ ಅಂಶವೆಂದರೆ ಸ್ವದೇಶಿ ಚಿಂತನೆ. ""ಸ್ವದೇಶಿ ಎಂದರೆ ಕೇವಲ ಸ್ಥಳಿಯ ವಸ್ತು ಬಳಕೆ ಮಾತ್ರವಲ್ಲ, ಜೀವನ ಶೈಲಿಯಲ್ಲಿಯೂ ಆ ಪರಿವರ್ತನೆ ತರಬೇಕು. ಉಡುಗೆ, ಆಹಾರ, ಭಾಷೆ ಎಲ್ಲದರಲ್ಲೂ ನಮ್ಮ ಸ್ವಭಾವ ಪ್ರತಿಬಿಂಬಿಸಬೇಕು. ಮಕ್ಕಳಿಗೆ ಇಂಗ್ಲಿಷ್​ ಕಲಿಸುವುದರಲ್ಲಿ ತಪ್ಪಿಲ್ಲ, ಆದರೆ ಮಾತೃಭಾಷೆಯ ಗೌರವ ಮರೆಯಬಾರದು ಎಂದರು.

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸೇವಾ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಡಿ.ಎಸ್​.ಮೋಹನ್​ಕುಮಾರ್​, ಹುಳಿಯಾರು ಆರ್​ಎಸ್​ಎಸ್​ ಅಧ್ಯಕ್ಷ ಶ್ರೀಧರ್​ ಇದ್ದರು.

40&50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸೇವೆ:

ಆರ್​ಎಸ್​ಎಸ್​ ಭಾರತದಲ್ಲಷ್ಟೇ ಅಲ್ಲ, 40&50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಿಂದು ಸ್ವಯಂ ಸೇವಕ ಸಂದ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾ ಭಾರತಿಯ ಮೂಲಕ 30,000 ಕ್ಕೂ ಹೆಚ್ಚು ಶಾಲೆಗಳನ್ನು ಸಂ ನಡೆಸುತ್ತಿದ್ದು, ಒಂದು ಕೋಟಿಗಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ಜ್ಞಾನ ಜತೆಗೆ ಶೀಲ ಮತ್ತು ದೇಶಭಕ್ತಿಗೆ ಆದ್ಯತೆ ನೀಡಲಾಗುತ್ತದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ಸಹ ಯುವಕರಲ್ಲಿ ಸಂಟನಾ ಶಕ್ತಿ ಮತ್ತು ದೇಶಪ್ರೇಮ ಬೆಳೆಸುತ್ತಿದೆ ಎಂದು ದಣ ಪ್ರಾಂತ ಬಾಲಗೋಕುಲ ಸಂಯೋಜಕ ಉಮೇಶ್​ ತಿಳಿಸಿದರು.