ಸಿರವಾರ 7ನೇ ವಾರ್ಡ್‌ನಲ್ಲಿ ಅಂಗನವಾಡಿ ಕೇಂದ್ರಕ್ಕೆ ಶಾಸಕ ಜಿ.ಹಂಪಯ್ಯ ನಾಯಕ ಉದ್ಘಾಟಿಸಿದರು. ಪಪಂ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಅದೇಪ, ಸದಸ್ಯ ಕೃಷ್ಣ ನಾಯಕ, ಹಸೇನ್ ಅಲೀ ಸಾಬ್, ಸೂರಿ ದುರಗಣ್ಣ ನಾಯಕ, ಎಚ್.ಮಾಕರ್ಂಡೆಪ್ಪ, ಮೌಲಸಾಬ್ ವರ್ಚಸು, ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಸಿಡಿಪಿಒ ನಾಗರತ್ನಾ ನಾಯಕ ಇತರರಿದ್ದರು. 
ಜಿಲ್ಲೆ

ಸರ್ಕಾರದ ಸೌಲಭ್ಯ ಸದುಪಯೋಗವಾಗಲಿ

ರುದ್ರಪ್ಪ ವಾಲಿ

ಸಿರವಾರ: ಪಟ್ಟಣದಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ ವಿವಿಧ ಯೋಜನೆಗಳಿಗೆ ಶಾಸಕ ಜಿ.ಹಂಪಯ್ಯ ನಾಯಕ ಚಾಲನೆ ನೀಡಿದರು.

ನಂತರ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಿಕ್ಷಣ ಸಿಗಬೇಕು. ಸರ್ಕಾರ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಆಹಾರ ನೀಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭ ಮಾಡಿದೆ.

ಸರ್ಕಾರದ ಸೌಲಭ್ಯಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. 1 ಮತ್ತು 7ನೇ ವಾರ್ಡ್‌ನಲ್ಲಿ 15 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ, ಪ.ಪಂ 15ನೇ ಹಣಕಾಸು ಯೋಜನೆಯಡಿಯಲ್ಲಿ 12.50 ಲಕ್ಷ ರೂ.ವೆಚ್ಚದಲ್ಲಿ ಮಹಿಳೆಯರ 2 ಹೈಟೆಕ್ ಶೌಚಗೃಹಗಳನ್ನು ಉದ್ಘಾಟಿಸಿದರು.

ಮುಖಂಡರಾದ ಶಿವಶರಣ ಸಾಹುಕಾರ ಅರಿಕೇರಿ, ನಿಂಬಯ್ಯ ಸ್ವಾಮಿ, ಚುಕ್ಕಿ ಉಮಾಪತಿ ಸಾಹುಕಾರ, ಮಲ್ಲಪ್ಪ ದೊಡ್ಮನೆ, ಕಲ್ಲೂರು ಬಸವರಾಜ ನಾಯಕ, ಜಿ.ವೀರೇಶ ಸಾಹುಕಾರ್, ಬಂದೇನವಾಜ್, ರಂಗನಾಥ ಭೋವಿ, ನಾಗರಾಜ, ಎಂ.ಶ್ರೀನಿವಾಸ, ಬಸವರಾಜ ನಾಯಕ ದಳಪತಿ ಇತರರಿದ್ದರು.